ಶೀಘ್ರದಲ್ಲೇ ಬಿಜೆಪಿಯ ಮುಖಂಡರು ಜೆಡಿಎಸ್ ಸೇರ್ಪಡೆ : ಶಾಸಕ ಡಿ.ಸಿ. ಗೌರಿ ಶಂಕರ್
ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತವೂ
ಸೇರಿದಂತೆ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಪ್ರಬಲ
ಮುಖಂಡರು ನನ್ನ ಜೊತೆ ಸಂಪರ್ಕದಲ್ಲಿದ್ದು,ಅತಿ
ಶೀಘ್ರದಲ್ಲಿ ಜೆಡಿಎಸ್ ಪಕ್ಷ ಸೇರಲಿದ್ದಾರೆ ಎಂದು
ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ. ಗೌರಿ
ಶಂಕರ್ ತಿಳಿಸಿದ್ದಾರೆ.
ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಬಿಜೆಪಿ
ತೊರೆದು ಜೆಡಿಎಸ್ ಸೇರ್ಪಡೆಗೊಂಡ ಜಿಲ್ಲಾ
ಪಂಚಾಯಿತಿ ಮಾಜಿ ಸದಸ್ಯ ರಾಮಾಂಜಿನಪ್ಪ,
ತಾಲೂಕು ಪಂಚಾಯಿತಿ ಹಾಲಿ ಸದಸ್ಯರಾದ ಪಿ
ಎಲ್‌ಆರ್ ರಮೇಶ್, ಶಿವಣ್ಣ, ಕವಿತಾ ರಮೇಶ್,
ಹಾಲಿ ಗ್ರಾಪಂ ಸದಸ್ಯರಾದ ಕುಂಭಯ್ಯ,ಹೊನ್ನೇಶ್
ಸೇರಿದಂತೆ ಹಲವರನ್ನು ಜೆಡಿಎಸ್ ಬಾವುಟ
ನೀಡುವ ಮೂಲಕ ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ
ಅವರು,ತುಮಕೂರು ಗ್ರಾಮಾಂತರದ ಬಿಜೆಪಿಯಲ್ಲಿ
ಉಸಿರುಗಟ್ಟುವ ವಾತಾವರಣದಿಂದ ಅನೇಕ ಮಂ
ದಿ ಪಕ್ಷವನ್ನು ತೊರೆದು ಜೆಡಿಎಸ್ ಸೇರ್ಪಡೆ
ಗೊಳ್ಳುತ್ತಿದ್ದಾರೆ ಎಂದರು.
ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಗ
ಳಾಗಿದ್ದ ಅವಧಿಯಲ್ಲಿ ಕೊಟ್ಟಂತಹ ಜನಪರ
ಕಾರ್ಯಯೋಜನೆಗಳು ಮತ್ತು ನಮ್ಮ ಪಕ್ಷದ
ಅಜೆಂಡಾ, ತತ್ವ ಸಿದ್ಧಾಂತಗಳನ್ನು ಒಪ್ಪಿ ಇಂದು
ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.ಗ್ರಾ ಮಾಂತರ
ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ನಮಗೆ ಉಸಿ ರುಗಟ್ಟಿದ
ವಾತಾವರಣವಿದೆ. ಆದುದರಿಂದ ಹೆಚ್.ಡಿ.
ದೇವೇಗೌಡರು ಮತ್ತು ಹೆಚ್.ಡಿ.ಕುಮಾ ರಸ್ವಾಮಿ
ಯವರ ಕೈ ಬಲಪಡಿಸ ಬೇಕೆಂಬ ನಿಟ್ಟಿನಲ್ಲಿ ಬಿಜೆಪಿ
ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಗೊಂ
ಡಿರುವುದಾಗಿ ಮುಖಂಡರು ತಿಳಿಸಿದ್ದಾರೆ ಎಂದರು.
ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು
ಪಂಚಾಯಿತಿ ಸ್ಥಾನಗಳನ್ನು ಹೆಚ್ಚು ಗೆಲ್ಲಲು
ಪಣ ತೊಡಲಾಗಿದೆ. ಜೊತೆಗೆ ಮುಂಬರುವ
ವಿಧಾನ ಪರಿಷತ್ ಚುನಾವಣೆಯನ್ನು ಟಾ
ರ್ಗೆಟ್ ಇಟ್ಟುಕೊಂಡು ಹೊರಟಿದ್ದೇವೆ.ವಿಪ
ಚುನಾವಣೆಯನ್ನು ಗೆಲ್ಲಲೇಬೇಕು ಎಂಬ ಉದ್ದೇಶ
ವನ್ನಿಟ್ಟುಕೊಂಡು ಇಂದು ಅನೇಕ ಮಂದಿ ಜೆಡಿಎಸ್
ಸೇರ್ಪಡೆಗೊಂಡಿದ್ದಾರೆ.ಮುಂದಿನ ತಿಂಗಳಲ್ಲಿ
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ
ಯವರನ್ನು ಕರೆಯಿಸಿ ಬೃಹತ್ ಸೇರ್ಪಡೆ
ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು
ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದರು.
ತುಮಕೂರು ಗ್ರಾಮಾಂತರ ಜೆಡಿಎಸ್ ಭದ್ರಕೋಟೆ
ಯಾಗಿದ್ದು, ಇಡೀ ಜಿಲ್ಲೆಯನ್ನು ಮತ್ತೆ ಜೆಡಿಎಸ್
ಭದ್ರಕೋಟೆಯನ್ನಾಗಿಸುವ ಗುರಿ ನಮ್ಮ ಮುಂದಿದೆ.
ಇಡೀ ರಾಜ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರು
123 ಮಿಷನ್ ಇಟ್ಟುಕೊಂಡಂತೆ, ನಮ್ಮ ಜಿಲ್ಲೆಯಲ್ಲಿ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ
ಜಿಲ್ಲೆಯ 11 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳನ್ನು
ಜೆಡಿಎಸ್ ಗೆಲ್ಲಿಸುವ ಟಾರ್ಗೆಟ್ ಇಟ್ಟುಕೊಂಡು
ಕೆಲಸ ಮಾಡುತ್ತಿರುವುದಾಗಿ ಡಿ.ಸಿ.ಗೌರಿಶಂಕರ್
ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು
ಪಂಚಾಯಿತಿ ಚುನಾವಣೆಗೆ ಎಷ್ಟು ಮುತುವರ್ಜಿ
ತೋರಿಸುತ್ತೇವೆಯೋ ಶತಾಯ ಗತಾಯ ವಿಧಾನ
ಪರಿಷತ್ ಚುನಾವಣೆಗೂ ಸಹ ನಮ್ಮ ಜೆಡಿಎಸ್
ಪಕ್ಷದ ಶಕ್ತಿ ಏನೆಂಬುದನ್ನು ತೋರಿಸಿ, ಮೂರು
ತಿಂಗಳು ಮನೆ ಬಿಟ್ಟಾದರೂ ಸಹ ಮುಂಬರುವ
ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್
ಅಭ್ಯರ್ಥಿಯನ್ನು ಗೆಲ್ಲಿಸುವ ಪ್ರತಿಷ್ಠೆಯನ್ನಾಗಿ ಚಾಲೆ
ಂಜ್ ಆಗಿ ತೆಗೆದುಕೊಂಡಿದ್ದೇನೆ ಎಂದು ತಿಳಿಸಿದರು.
ಈ ವೇಳೆ ಹಾಗಲವಾಡಿ ಜಿಲ್ಲಾ ಪಂಚಾಯತ್
ಮಾಜಿ ಸದಸ್ಯ ರಾಮಾಂಜಿನಪ್ಪ, ಹಿರೇಹಳ್ಳಿ ತಾಪಂ
ಸದಸ್ಯ ರಮೇಶ್, ಕೋಳಾಲ ತಾಪಂ ಸದಸ್ಯೆ
ಕವಿತಾ ರಮೇಶ್, ದೊಡ್ಡೇರಿ ಬೆಳ್ಳಾವಿ ವಿಭಾಗದ
ತಾಪಂ ಸದಸ್ಯ ಶಿವಣ್ಣ ಮತ್ತು ಅನೇಕ ಬೆಂಬಲಿಗರು
ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡರು.
ಸರಳ ಸಮಾರಂಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ
ಆರ್.ಸಿ.ಆಂಜಿನಪ್ಪ,ರಾಜ್ಯ ಹಿರಿಯ ಉಪಾಧ್ಯಕ್ಷ
ಗಂಗಣ್ಣ,ಜಿಲ್ಲಾ ಕಾರ್ಯಾಧ್ಯಕ್ಷರಾದ ಹಾಲನೂರು
ಅನಂತಕುಮಾರ್,ಟಿ.ಆರ್.ನಾಗರಾಜ್, ತಾಲೂಕು
ಅಧ್ಯಕ್ಷ ರಾಮಚಂದ್ರಪ್ಪ, ಪ್ರಚಾರ ಸಮಿತಿ ಅಧ್ಯಕ್ಷ
ಚಲುವರಾಜ್, ಹಿರೇಹಳ್ಳಿ ಮಹೇಶ್, ವಿಜಯ್
ಕುಮಾರ್, ಸೋಲಾರ್ ಕೃಷ್ಣಮೂರ್ತಿ,ಕೆಂಪಹನು
ಮಯ್ಯ, ತನ್ವೀರ್,ಆಜಂ, ಬಸವರಾಜು, ಬೈರೇ
ಗೌಡ್ರು ಸೇರಿದಂತೆ ಅನೇಕ ಮಂದಿ ಜೆಡಿಎಸ್ ಮು
ಖಂಡರು, ಕಾರ್ಯಕರ್ತರು ಹಾಜರಿದ್ದರು.