ಕಟ್ಟೆಗಣಪತಿ ಮಹಿಳಾ ಮಂಡಲಿಯಿಂದ ಗೌರಿ ಹಬ್ಬ ಆಚರಣೆ
ಕೊರಟಗೆರೆ-ಸಾನಾತನ ಕಾಲದಿಂದಲೂ ಬಾದ್ರಪದಮಾಸದಲ್ಲಿ ನಡೆದುಕೊಂಡು ಬರುತ್ತಿರುವ ಗೌರಿಗಣೇಶ ಹಬ್ಬಗಳು ಹಿಂದುಗಳ ಪವಿತ್ರ ಹಬ್ಬವಾಗಿದ್ದು ಗೌರಿಹಬ್ಬವನ್ನು ಎಲ್ಲಾ ಮಹಿಳೆಯರು ಸೇರಿ ಆಚರಿಸುತ್ತಿದ್ದೇವೆ ಎಂದು ಕೊರಟಗೆರೆ ಕಟ್ಟೆಗಣಪತಿ ಮಹಿಳಾಮಂಡಲಿ ಅದ್ಯಕ್ಷೆ ಗಿರಿಜಮ್ಮ ತಿಳಿಸಿದರು.
ಅವರು ಪಟ್ಟಣದ ಕಟ್ಟೇಗಣಪತಿ ಸಮುದಾಯಭವನದಲ್ಲಿ ಗೌರಿಹಬ್ಬದಂದು ಕಟ್ಟೆಗಣಪತಿ ಮಹಿಳಾಮಂಡಲಿ ವತಿಯಿಂದ ಏರ್ಪಡಿಸಿದ್ದ ಸಮೂಹಿಕ ಸ್ವರ್ಣಗೌರಿ ಪೂಜಾಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತಾನಾಡಿ ಈ ಹಬ್ಬವನ್ನು ವಿಷೇಶವಾಗಿ ಮಹಿಳೆಯರು ಆಚರಿಸುತ್ತಾರೆ, ಆದರೆ ಮನೆಗಳಲ್ಲಿ ಮಾಡುವ ಗೌರಿಪೂಜೆಯನ್ನು ಎಲ್ಲರೂ ಒಟ್ಟುಗೂಡಿ ಜಾತ್ಯಾತೀತವಾಗಿ ಸಮುದಾಯಭವನದಲ್ಲಿ ಆಚರಿಸುತ್ತಿದ್ದೇವೆ,ಇದು ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವ ಸಂಪ್ರದಾಯವಾಗಿದ್ದು ಒಂದೊಂದು ಹಬ್ಬಕ್ಕೂ ವೈಶಿಷ್ಟ್ಯವಿರುತ್ತದೆ ಎಂದರು.
ಪೂಜಾಕಾರ್ಯ ನೆರವೇರಿಸಿದ ಅರ್ಚಕ ದತ್ತಾತ್ರೇಯದೀಕ್ಷಿತ್ ಮಾತಾನಾಡಿ ಆಧುನಿಕ ಜಗತ್ತು ಎಷ್ಟೇ ಮುಂದುವರೆದರು,ಪ್ರಕೃತಿ ದೈವವನ್ನು ಅರಿಯಲು ಮನುಷ್ಯನಿಗೆ ಸಾದ್ಯವಾಗಿಲ್ಲ, ಹಿಂದೆ ಪೂರ್ವಜರು ಮಾಸ,ಹಬ್ಬ,ಆಚರಣೆಗಳನ್ನು ಕಾಲ,ಋತು ಹವಾಮಾನ ಬದಲಾವಣೆ ಅರಿತೆ ಬರೆದಿಟ್ಟಿದ್ದಾರೆ,ಇಂದಿನ ಗೌರಿಹಬ್ಬವನ್ನು ಮಹಿಳಾಮಂಡಲಿಯಿಂದ ಒಟ್ಟಾಗಿ ಸರಳವಾಗಿ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ, ಬರುವ ಮುಂದಿನ ದಿನಗಳಲ್ಲಿ ಕರೋನಾ ರೋಗ,ಸೇರಿದಂತೆ ಸಮಾಜದಲ್ಲಿ ಎಲ್ಲಾಕೆಟ್ಟದ್ದು ನಾಶವಾಗಿ ಒಳ್ಳೆಯದಿನಗಳು ಮೂಡಲಿ,ಸರಳ ಹಬ್ಬಗಳು ವೈವಿದ್ಯವಾಗಿ,ವಿಜೃಂಬಣೆಯಿಂದ ಆಚರಿಸುವಂತ್ತಾಗಲಿ ಎಂದರು.ಪೂಜಾಕಾರ್ಯದಲ್ಲಿ ಮಂಡಲಿಯ ಸದಸ್ಯರಾದ ಯಶೋದ,ಲೀಲಾವತಿ,ಅನುರಾಧ,ಶುಭ,ತುಳಸಿ,ಚೈತ್ರ,ಸರಸ್ವತಮ್ಮ,ಗೀತಾ, ಕಾತ್ಯಾಯಿನಿ,ಲಕ್ಷ್ಮೀನರಸಮ್ಮ,ಸರಸ್ವತಿ,ಭಾಗ್ಯ ಸೇರಿದಂತೆ ಇತರರು ಹಾಜರಿದ್ದರು.