ಶ್ರೀಗಂಧ ಕಳ್ಳ ರ ಮೇಲೆ ಅರಣ್ಯ ಸಿಬ್ಬಂದಿ ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಗುಬ್ಬಿ : ತಾಲ್ಲೊಕು ಕಡಬಾ ಹೋಬಳಿ ಹರಗಲದೇವಿ ಗುಡ್ಡ ಸ.ನಂ. 1 ರ 1500 ಎಕರೆ ವಿಸ್ತೀರ್ಣದ ಮೀಸಲು ಅರಣ್ಯ ಪ್ರದೇಶದಲ್ಲಿ ಶ್ರೀಗಂಧ ಮರ ಕಳ್ಳತನ ಮಾಡಲು ತಮಿಳುನಾಡು ಮೂಲದ 12 ಜನರ ತಂಡ ಬಂದಿರುವ ಖಚಿತ ಮಾಹಿತಿ ಪಡೆದ ವಲಯ ಅರಣ್ಯಾಧಿಕಾರಿ ದುಗ್ಗಪ್ಪ ಮತ್ತು ಸಿಬ್ಬಂದಿಗಳು ಶ್ರೀಗಂಧ ಮರ ಕಳ್ಳರು ಮರ ಕಡಿಯುವ ವೇಳೆ ಭಾನುವಾರ ಸಂಜೆ 4ರ ಸಮಯದಲ್ಲಿ ಶ್ರೀಗಂಧ ಕಳ್ಳರ ಮೇಲೆ ಗುಂಡು ಹಾರಿಸಿ ಬಂಧಿಸಿದ ಘಟನೆಗೆ ಸಂಬಂದಿಸಿದಂತೆ ಮೂವರು ಆರೋಪಿಗಳನ್ನು ಸ್ಥಳದಲ್ಲಿ ಬಂಧಿಸಲಾಯಿತು ಎನ್ನಲಾಗಿದೆ. ಬಳಿಕ ಕೈ, ಕಾಲುಗಳನ್ನು ಕಟ್ಟಿ ಮನ ಬಂದಂತೆ ಹಲ್ಲೆ ಮಾಡಿದ ಒಂದು ನಿಮಿಷದ ವಿಡಿಯೋವನ್ನು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಮಾಡಿ ವಿಕೃತಿ ಮೆರೆದು ಮಾನವ ಹಕ್ಕನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ತಾಲ್ಲೂಕಿನ ಪ್ರಜ್ಞಾವಂತರ ನಾಗರಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಲಾಖೆ ಅಧಿಕಾರಿಗಳು ಮಾಧ್ಯಮದವರಿಗೆ ಮಾಹಿತಿ ನೀಡಲು ನ್ಯಾಯಾಂಗದ ಆದೇಶವಿದ್ದು ಯಾವುದೇ ಮಾಹಿತಿ ನೀಡುವುದಿಲ್ಲ ಎಂದು ತಿಳಿಸುವ ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆರೋಪಿಗಳು ಹಲ್ಲೆ ನಡೆಸುವ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದು ಎಷ್ಟು ಸರಿ ಇದು ನ್ಯಾಯಾಂಗ ಆದೇಶದ ಉಲ್ಲಂಘನೆ ಅಲ್ಲವೇ..? ಪತ್ರಕರ್ತರೊಬ್ಬರು ಗುಬ್ಬಿ ವಲಯ ಅರಣ್ಯಾಧಿಕಾರಿ ದುಗ್ಗಪ್ಪ ಅವರಿಗೆ ಫೋನ್ ಮೂಲಕ ಸಂಪರ್ಕಿಸಿ ವಿಡಿಯೋ ವೈರಲ್ ಆಗಿರುವ ಬಗ್ಗೆ ಮಾತನಾಡಿಸುವ ವೇಳೆ ದುಗ್ಗಪ್ಪ ಅವರು ನಾವು ಮರ ಕಳ್ಳರನ್ನು ಹಿಡಿಯಲು ಮುಂದಾದಾಗ ಮರ ಕಳ್ಳರ ಬಳಿ ನಾಡ ಬಂದೂಕು ಇತ್ತು ಅಲ್ಲದೆ ಅವರು ನಮ್ಮ ಮೇಲೆ ಗುಂಡು ಹಾರಿಸಿದರು ಎಂದು ಹೇಳಿಕೆ ನೀಡಿದ್ದಾರೆ. ಆದರೆ ಎಲ್ಲೂ ಕೂಡ ನಾಡ ಬಂದೂಕಿನ ಬಗ್ಗೆ ವಿವರಣೆಯೇ ಇಲ್ಲ ಇದು ವಲಯ ಅರಣ್ಯಾಧಿಕಾರಿ ದುಗ್ಗಪ್ಪ ಅವರ ಹೇಳಿಕೆ ಮೇಲೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದೆ.