ವಾರ್ಡ್ ನಂ.21ರ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಚಾಲನೆ

ತುಮಕೂರು : ಮಹಾನಗರಪಾಲಿಕೆಯ ವಾರ್ಡ್ ನಂ.21ರ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿಯಲ್ಲಿ ವಿವಿಧ ರಸ್ತೆಗಳ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರು ಭೂಮಿ ಪೂಜೆ ನೆರವೇರಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು ರಾಜ್ಯ ಸರ್ಕಾರದ ನಗರಾಭಿವೃದ್ಧಿಯ ಯೋಜನೆಯಲ್ಲಿ ಪ್ರತಿ ಮಹಾನಗರಪಾಲಿಕೆಗೂ ರೂ.125.00 ಕೋಟಿ ಅನುದಾನ ನೀಡಿದ್ದು, ಈ ಅನುದಾನದಲ್ಲಿ ತುಮಕೂರಿನ ಎಲ್ಲಾ ವಾರ್ಡಿನಲ್ಲೂ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ರೂ.125.00 ಕೋಟಿಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳಿಗೆ ಮಹಾನಗರಪಾಲಿಕೆ ಮತ್ತು ರಾಜ್ಯ ಸರ್ಕಾರದ ವಂತಿಕೆಗಳನ್ನು ಕಳೆದು ಕಾಮಗಾರಿಗೆ ಸುಮಾರು 44.00 ಕೋಟಿ ರೂಗಳು ಲಭ್ಯವಿದೆ.
ಈ ಭಾಗದಲ್ಲಿ ಸದರಿ ಕಾಮಗಾರಿಗಳು ರೂ.210.00 ಲಕ್ಷಗಳ ವೆಚ್ಚದಲ್ಲಿ ನಡೆಯಲಿದ್ದು, ಸುಮಾರು 6405 ಮೀಟರ್‌ನಷ್ಟು ಹಾಸ್ಪಾಲ್ಟ್, ಸುಮಾರು 2 ಕಿ.ಮೀ ನಷ್ಟು ಚರಂಡಿ ಮತ್ತು ಸುಮಾರು 80 ಮೀಟರ್ ನಷ್ಟು ಸಿಸಿ ರಸ್ತೆ ಹಾಗೂ ಕಲ್ವರ್ಟ್ಗಳನ್ನು ನಿರ್ಮಿಸಲಾಗುತ್ತಿದೆ. ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ಸಿಸಿ ಚರಂಡಿ ಹಾಗೂ ರಸ್ತೆ ಮಾಡಲಾಗುವುದು ಈ ಸಂದರ್ಭದಲ್ಲಿ ಸಾರ್ವಜನಿಕರು ಕಾಮಗಾರಿ ನಡೆಯುವ ಸಮಯದಲ್ಲಿ ಸಹಕರಿಸಬೇಕೆಂದು ತಿಳಿಸಿದರು.
ಈ ಸಂಧರ್ಭದಲ್ಲಿ ಮಹಾನಗರಪಾಲಿಕೆಯ ಮಹಾಪೌರರಾದ ಬಿ.ಜಿ.ಕೃಷ್ಣಪ್ಪ, ಪಾಲಿಕೆ ಸದಸ್ಯರಾದ ಲಲಿತ ರವೀಶ್, ಪಾಲಿಕೆ ಆಯುಕ್ತರಾದ ರೇಣುಕಾ, ಮುಖಂಡರಾದ ಆಂಜಿನಪ್ಪ, ಸರೋಜಗೌಡ, ವೈ.ಜಿ ರಾಜೇಂದ್ರ, ಯೋಗೀಶ್, ಲಾಯರ್ ಸುರೇಶ್, ಪಾಲಿಕೆ ಸಿಬ್ಬಂದಿ ಹಾಗೂ ಮುಂತಾದ ಮುಂಖಡರು ಹಾಜರಿದ್ದರು.