ತಿಪಟೂರು : ಭಾರತ ಸರ್ಕಾರ ಪೌಷ್ಟಿಕತೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹ ಆರಂಭವಾಯಿತು. ಅಪೌಷ್ಟಿಕತೆ ನಿವಾರಣೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಎಂದು ಕೃಷಿ ವಿಜ್ಞಾನ ಕೇಂದ್ರ ದ ವಿಜ್ಞಾನಿಯಾದ ರೂಪಾ ಬಿ. ಪಾಟೀಲ್ ರವರು ತಿಳಿಸಿದರು. ಉತ್ತಮ ದವಸ ಧಾನ್ಯಗಳನ್ನು ಉಪಯೋಗಿಸುವುದರ ಮೂಲಕ ಆರೋಗ್ಯ ಕಾಪಾಡಿಕೊಂಡು ಕಡಿಮೆ ತೂಕದ ಶಿಶು ಜನನ, ಮಹಿಳೆಯರಲ್ಲಿ ಮತ್ತು ಮಕ್ಕಳಲ್ಲಿ ರಕ್ತ ಹೀನತೆ ಪ್ರಮಾಣ ಶೇಕಡಾ 59 ಇದೆ, ಹಾಗಾಗಿ ಶಿಶು ಮರಣ, ತಾಯಂದಿರ ಮರಣ ತಪ್ಪಿಸುವದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು. ಹಾಲು ರ‍್ಕರಪಿಷ್ಟ ಪ್ರೊಟೀನ್ ಯುಕ್ತ ಆಹಾರ, ವಿಟಮಿನ್ ಎ, ವಿಟಮಿನ್ ಡಿ, ಒಳಗೊಂಡ ಆಹಾರ ಪದರ‍್ಥಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ
ಸಾಸಲಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಿಪಟೂರು ಶ್ರೀ ಚೌಡೇಶ್ವರಿ, ಶ್ರೀ ದೇವಿ, ಸ್ತ್ರೀಶಕ್ತಿ ಸ್ವಸಹಾಯ ಸಂಘ, ಗ್ರಾಮ ಮಿತ್ರ ಸಂಘ ಸಾಸಲಹಳ್ಳಿ, ಇವರ ಸಂಯುಕ್ತಾಶ್ರಯದಲ್ಲಿ “75 ನೇ ಭಾರತ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಆಚರಣೆ ” ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹ ‘ ಪೋಷಣ್ ಮಾಸಾಚರಣೆ’ ಮತ್ತು ಪ್ರಧಾನ ಮಂತ್ರಿ ಮಾತೃ ವಂದನ ಸಪ್ತಾಹ ಹಾಗೂ ಕೋವಿಡ್ -19 ಸಂಭಾವ್ಯ 3 ನೇ ಅಲೆಯ ಹಿನ್ನೆಲೆಯಲ್ಲಿ ಮಕ್ಕಳ ಸಂರಕ್ಷಣೆ ಕುರಿತು ಜಾಗೃತಿ ಕಾರ‍್ಯಕ್ರಮವನ್ನು ಕಾರ‍್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಪಿ. ಓಂಕಾರಪ್ಪ ಇವರು ಮಾತನಾಡುತ್ತಾ “ಬೆಳೆಯುವ ಸಿರಿ ಮೊಳಕೆಯಲ್ಲಿ” ಎನ್ನುವಂತೆ ಪ್ರಾರಂಭದಿಂದಲೇ ಚುರುಕು ಆಹಾರ ಅಂದರೆ ಆರು ತಿಂಗಳು ತಾಯಿಯ ಎದೆಹಾಲು ಆರು ತಿಂಗಳು ತುಂಬಿದ ನಂತರ ಮನೆಯಲ್ಲೇ ಸಿಗುವಂತಹ ಏಕದಳ ದ್ವಿದಳ ಧಾನ್ಯಗಳು ಸೊಪ್ಪು, ತರಕಾರಿ, ಹಾಲು, ಮೀನು, ಮಾಂಸ, ಮೊಟ್ಟೆ, ಹಳದಿ ಜಾತಿಯ ಹಣ್ಣುಗಳನ್ನು ಕೊಡಬೇಕು. ಸದೃಢ ಸಮಾಜ ನರ‍್ಮಾಣವಾಗಬೇಕಾದರೆ ಸದೃಢ ಮಗುವಿರಬೇಕು ಎಂದು ತಿಳಿಸಿದರು. ಮಗುವಿನ ಬೆಳವಣಿಗೆ ಆಗಬೇಕಾದರೆ ತಾಯಿಯ ಪಾತ್ರ ಅತಿಮುಖ್ಯ ಎಂದರು. ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ, ಭಾಗ್ಯಲಕ್ಷ್ಮಿ ಯೋಜನೆ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.. ಕೋವಿಡ್ 3 ನೇ ಅಲೆಯ ಸಂಭಾವ್ಯದ ಪ್ರಯುಕ್ತ ಗರ್ಬಿಣಿ, ಬಾಣಂತಿಯರು ಅಂಗನವಾಡಿ ಕೇಂದ್ರದ ಫಲಾನುಭವಿಗಳ ತಂದೆ-ತಾಯಿ ಕಡ್ಡಾಯವಾಗಿ ಲಸಿಕೆಯನ್ನು ಪಡೆದುಕೊಳ್ಳಬೇಕು ಹಾಗೂ ಕೋವಿಡ್ ಕೋವಿಡೇತರ ಕಾರಣಗಳಿಂದ ಮರಣಹೊಂದಿದ ಪೋಷಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ನೀಡಿತ್ತಿರುವ ಸೌಲಭ್ಯ ಪಡೆದುಕೊಳ್ಳಬೇಕು ಇಂದು ನೆಡೆಯುತ್ತುರುವ ಪೋಷಣ್ ಮಾಸಾಚರಣೆ ಕರ‍್ಯಕ್ರಮ ಒಂದು ತಿಂಗಳು ಜನಾಂದೋಲನ ರೀತಿಯಲ್ಲಿ ನೆಡೆಸಿ ಸಾರ್ವಜನಿಕರಿಕೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ರಾದ ರುಕ್ಮಿಣಿ ಇವರು ಹಾಲು ಅಮೃತಕ್ಕೆ ಸಮಾನ, ಮಗುವಿಗೆ ಅತ್ಯತ್ತಮ ಪೌಷ್ಟಿಕ ಆಹಾರವಾದ ತಾಯಿಯ ಎದೆ ಹಾಲನ್ನು ಕಡ್ಡಾಯವಾಗಿ ಕೊಡಬೇಕು ಎಂದು ತಿಳಿಸುತ್ತಾ ಮಹಿಳೆಯರು ಮತ್ತು ಗರ್ಬಿಣಿ ಬಾಣಂತಿಯರು ಸ್ಥಳೀಯವಾಗಿ ಸಿಗುವ ಹಣ್ಣು ತರಕಾರಿ ಸೊಪ್ಪು, ಹಾಲು,ಮತ್ತು ಹಾಲಿನ ಉತ್ಪನ್ನಗಳು ಸೇವಿಸಬೇಕು, ಮೊಳಕೆಕಾಳು ಸೇವಿಸಬೇಕು ಎಂದರು.” ಆರೋಗ್ಯವಂತ ಮಗು ದೇಶದ ಸಂಪತ್ತು” ಸದೃಢ ದೇಶ ವಾಗಬೇಕಾದರೆ ಸಂತೃಪ್ತ ಕುಟುಂಬ ಸದೃಢ ಮಗು ಇರಬೇಕು , ಮಗು ಸರ್ವತೋಮುಖ ಬೆಳವಣಿಗೆ ಆಗಬೇಕಾದರೆ ಪೌಷ್ಟಿಕ ಆಹಾರದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.ಈ ಕಾರ‍್ಯಕ್ರಮದಲ್ಲಿ ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಯಶಸ್ವಿನಿ, ಗ್ರಾಮ ಪಂಚಾಯತಿ ಸದಸ್ಯರು ಕರ‍್ತೇಶ್ , ಶ್ರೀನಿವಾಸ್ ಗ್ರಾಮ ಮಿತ್ರ ಸಂಘದ ಅಧ್ಯಕ್ಷ ನವೀನ್ ಕುಮಾರ್, ಹಾಗೂ ಸಂಘದ ಸದಸ್ಯರು, ಮೇಲ್ವಿಚಾರಕರಾದ ಗೌರವ ಎಣ್ಣೆ, ಪದ್ಮಾ ಹೆಚ್ ಸಿ.ಆರ್ .ಪಿ ಗಳಾದ ನಾಗರತ್ನಮ್ಮ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಶೋಭಾ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರು ಗೋಪಿನಾಥ್ , ಮುಖ್ಯೋಪಾಧ್ಯಾಯರಾದ ರಂಗಪ್ಪ ಸಹಶಿಕ್ಷಕರು ಗಂಗಾಧರ್ ಅಂಗನವಾಡಿ ಕಾರ್ಯಕರ್ತೆ ರೇಣುಕಮ್ಮ ಸಹಾಯಕಿ ಗಿರಿಜಮ್ಮ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು, ಗರ್ಬಿಣಿ, ಬಾಣಂತಿಯರು ಸ್ತ್ರೀಶಕ್ತಿ ಮಹಿಳೆಯರು, ಮಕ್ಕಳ ತಾಯಂದಿರು ಹಾಜರಿದ್ದರು