ಜಿಲ್ಲೆಪಾವಗಡರಾಜ್ಯಸುದ್ದಿ
Trending

ಪರಿಶಿಷ್ಠ ವರ್ಗಕ್ಕೆ 7.5 ಮೀಸಲಾತಿ ತರುವುದೇ ನನ್ನ ಗುರಿ : ಸಚಿವ ಶ್ರೀರಾಮುಲು

ಪಾವಗಡ : ಪರಿಶಿಷ್ಠ ವರ್ಗಕ್ಕೆ 7.5 ಮೀಸಲಾತಿಯನ್ನ ತರುವುದೇ ನನ್ನ ಗುರಿ, ಮೊದಲ ಭಾರಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾ ಸಮಯದಲ್ಲಿ ಸಮುದಾಯಕ್ಕಾಗಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನ ಸರಕಾರಿ ಕಾರ್ಯಕ್ರಮವಾಗಿ ಘೋಷಿಸಿದೆ ಎಂದು ಪರಿಶಿಷ್ಠ ವರ್ಗಗಳ ಕಲ್ಯಾಣ ಹಾಗೂ ಸಾರಿಗೆ ಸಚಿವರಾದ ಶ್ರೀರಾಮುಲು ತಿಳಿಸಿದರು.
ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪಾವಗಡ ಪಟ್ಟಣ ದಲ್ಲಿ ಹಮ್ಮಿಕೊಂಡಿದ್ದ 16 ಕೋಟಿಯ ಅಂಬೇಡ್ಕರ್ ವಸತಿ ಶಾಲೆ ಹಾಗೂ 1 ಕೋಟಿ ವ್ಯಚ್ಚದ ಮಹರ್ಷಿ ವಾಲ್ಮೀಕಿ ಸಮುದಾಯ ಭವನವನ್ನ ಉದ್ಘಾಟಿಸಿ ಮಾತನಾಡಿದ ಅವರು ರಾಷ್ಠಕ್ಕೆ ಅನ್ನದಾಸೋಹದ ಸೊಗಡನ್ನ ಸಾರಿದ ಶ್ರೀಸಿದ್ದಗಂಗಾ ಸ್ವಾಮಿಜಿಗಳನ್ನ ಸ್ಮರಿಸಿದ ಸಚಿವರು ಒಂದು ಕಾಲದಲ್ಲಿ ಶಿಕ್ಷಣ ಉಳ್ಳವರಿಗೆ ಸೀಮಿತವಾಗಿತ್ತು, ಪರಿಶಿಷ್ಠ ಜಾತಿ ಪಂಗಡಗಳಿಗೆ ಉನ್ನತ ಶಿಕ್ಷಣ ನೀಡುವ ಸಲುವಾಗಿ ಸರಕಾರ ರಾಜ್ಯದ ಅಂಬೇಡ್ಕರ್, ಏಕಲವ್ಯ, ವಾಲ್ಮೀಕಿ, ಮುರಾರ್ಜಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳನ್ನ ಪ್ರತಿಯೊಂದು ತಾಲೂಕಿನಲ್ಲಿ ವಸತಿ ಶಾಲೆಗಳನ್ನ ತೆರೆದು ಶಿಕ್ಷಣ ಕಲ್ಪಿಸಲಾಗುತ್ತಿದ್ದು, ಸಮುದಾಯಕ್ಕಾಗಿ ಮೋದಲ ಭಾರಿಗೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಮಾತನಾಡಿ ವಾಲ್ಮೀಕಿ ಜಯಂತಿಯನ್ನ ಸರಕಾರಿ ಕಾರ್ಯಕ್ರಮವನ್ನಾಗಿ ಘೋಷಿಸಿದೆ ಎಂದರು.
ಬೊಮ್ಮಾಯಿರವರು ಮುಖ್ಯಮಂತ್ರಿಯಾದ ನಂತರ ಸಮುದಾಯಕ್ಕೆ ಪ್ರತ್ಯೇಕವಾದ ಸಚಿವಾಲಯನ್ನ ರಚನೆ ಮಾಡಿದರು, ಸಮುದಾಯದ ಬಹುದಿನ ಬೇಡಿಕೆಯಾದ 7.5 ಮೀಸಲಾತಿಯನ್ನ ಜಾರಿಗೆ ತಂದೆ ತರುತ್ತೇವೆ, ನಿಮ್ಮೆಲ್ಲರ ಹೋರಾಟಕ್ಕೆ ತಕ್ಕ ಪ್ರತಿಫಲ ಸಿಕ್ಕೆ ಸಿಗುತ್ತದೆ ಎಂದಾ ಅವರು ಮಹರ್ಷಿ ವಾಲ್ಮೀಕಿ ಆರ್ಶಿವಾದದಿಂದ ವಾಲ್ಮೀಕಿ ಭವನಕ್ಕೆ ನಾನು ಭೂಮಿ ಪೂಜೆ ಮಾಡಿದ್ದೆ ಆದರೆ ಉದ್ಘಾಟನೆ ಕೂಡ ನಾನೇ ಮಾಡುತ್ತಿರುವುದು ಮಹರ್ಷಿ ವಾಲ್ಮೀಕಿಯ ಆರ್ಶಿವಾದ ಎಂದರು.
ರಾಜ್ಯದಾದ್ಯಂತ ಮಹರ್ಷಿ ವಾಲ್ಮೀಕಿ ಭವನಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ, ಇಲ್ಲಿ ಸಮುದಾಯದ ಮದುವೆ ಸಭೆ ಸಮಾರಂಭಗಳು ನಡೆಯುತ್ತಿವೆ ಜೊತೆಗೆ ಈ ಭವನಗಳಲ್ಲಿ ಇಂದಿನ ಮಕ್ಕಳಿಗೆ ರಾಮಾಯಣದ ಬಗ್ಗೆ ತಿಳಿಸಿಕೊಡುವ ಪ್ರಯತ್ನವಾಗಬೇಕೆಂದಾ ಅವರು ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನ ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಸಮುದಾಯ ಬೆಳೆದಾಗ ಮಾತ್ರ ಆವಕಾಶಗಳ ಬಾಗಿಲು ತೆರೆಯುತ್ತದೆ ಎಂದರು.
ಶಾಸಕರಾದ ವೆಂಕಟರಮಣಪ್ಪ ಮಾತನಾಡಿ ಅಂಬೇಡ್ಕರ್ ವಸತಿ ಶಾಲೆ ಹಾಗೂ ವಾಲ್ಮೀಕಿ ಭವನ ನನ್ನ ಅವಧಿಯಲ್ಲಿ ನಡೆದ ಕಟ್ಟಡಗಳಾಗಿದ್ದು ಭವನಕ್ಕೆ ಭೂಮಿ ಸಿಗದ ವೇಳೆ ವೈದ್ಯರಾದ ಓಂಕಾರ್ ನಾಯಕರವರ ತಂದೆ ಭೂಮಿ ನೀಡಿ ಭವನ ನಿರ್ಮಿಸಿದ್ದು ಮರೆಯುವಂತಿಲ್ಲ ಎಂದಾ ಅವರು ಇದೇ ಭವನಗಳನ್ನ ತಾಲೂಕಿನ ನಾಲ್ಕು ಹೋಬಳಿಗಳಳ್ಲಿ ನಿರ್ಮಿಸಲು ಅನುದಾನ ನೀಡುವಂತೆ ಸಚಿವರನ್ನ ಒತ್ತಾಯಿಸಿದ ಶಾಸಕರು ಪಾವಗಡದಲ್ಲಿ ಆತೀಹೆಚ್ಚು ಜನಸಂಖ್ಯೆಯಲ್ಲಿ ನಾಯಕ ಸಮುದಾಯವಿದ್ದು, ಕೊಳವೆ ಬಾವಿಗಳು ಸಾಲಸೌಲಭ್ಯ, ಭವನಗಳನ್ನ ಹೆಚ್ಚಾಗಿ ತಾಲೂಕಿಗೆ ನಿಮ್ಮ ಆವಧಿಯಲ್ಲಿ ನೀಡಬೇಕೆಂದರು.
ನಿಡಗಲ್ ಮಹರ್ಷಿ ವಾಲ್ಮೀಕಿ ಸಂಸ್ಥಾನದ ಸಂಜಯ್‌ಕುಮಾರ್ ಸ್ವಾಮಿಜಿ ಕಾರ್ಯಕ್ರಮದ ಧಿವ್ಯ ಸಾನಿದ್ಯವಹಿಸಿದ್ದರು, ಭೂ ಧಾನಿಗಳಾಧ ಡಾ.ಓಂಕಾರ್ ನಾಯಕರವರನ್ನ ಸಚಿವರಾದ ಶ್ರೀರಾಮುಲು ಸನ್ಮಾನಿಸಿ ಅಭಿನಂದಸಿದರು.
ಕಾರ್ಯಕ್ರಮದಲ್ಲಿ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ಧೇಶಕರು ರಾಜ್‌ಕುಮಾರ್, ಕಾಂತರಾಜು, ಕವಿತ.ಎಂ ವರಂಗಲ್ ವ್ಯವಸ್ಥಾಪಕ ನಿರ್ಧೇಶಕರು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ದಿ ನಿಗಮ ಬೆಂಗಳೂರು ,ಜಿಲ್ಲಾ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಯ ತ್ಯಾಗರಾಜು, ತಾ.ಅಧಿಕಾರಿ ಸಿದ್ದರಾಜು, ಮಹರ್ಷಿ ವಾಲ್ಮೀಕಿ ಜಾಗೃತಿ ವೇದಿಕೆಯ  ಲೋಕೇಶ್ ಪಾಳ್ಳೇಗಾರ್, ಓಂಕಾರ್ ನಾಯಕ, ಚಿತ್ತಗಾನಹಳ್ಳಿ ಚಂದ್ರು, ಡಾ.ಜಿ.ವೆಂಕಟರಾಮಯ್ಯ, ರವಿಶಂಕರ್ ನಾಯ್ಕ್ ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker