ತುಮಕೂರು : ಇತ್ತೀಚಿನ ದಿನಗಳಲ್ಲಿ ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸುತ್ತಿರುವ ನೀತಿಗಳಿಂದ ನಗರ ಪ್ರದೇಶಗಳಲ್ಲಿ ಬಡತನ ಹಾಗೂ ಅಸಮಾನತೆ ಹೆಚ್ಚಾಗಿ ಸ್ಲಂ ನಿವಾಸಿಗಳ ಮೇಲೆ ಮುಂದುವರಿದ ದಮನ ಅಭಿವೃದ್ಧಿ ಹೆಸರಲ್ಲಿ ಜಾರಿಯಾಗುತ್ತಿರುವ ನೀತಿಗಳ ವಿರುದ್ಧ ಸ್ಲಂ ನಿವಾಸಿಗಳು ಜಾಗೃತರಾಗಬೇಕಿದೆ ಎಂದು ಪ್ರಗತಿಪರ ಚಿಂತಕರಾದ ಪ್ರೊ ಕೆ.ದೊರೈರಾಜ್ ಹೇಳಿದರು.
ಇಂದು ಚಿತ್ರುದುರ್ಗ ನಗರದ ಕೋಟೆ ಹತ್ತಿರವಿರುವ ಮಯೂರ ಹೋಟೆಲ್‌ನಲ್ಲಿ ಮೈಸೂರು ವಿಭಾಗದ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯ 2 ದಿನಗಳ ಕಾರ್ಯಗಾರವನ್ನು ಉದ್ಘಾಟಿಸಿ ದಿಕ್ಸೂಚಿ ಭಾಷಣವನ್ನು ಮಾಡಿದರು ಪ್ರಸ್ತುತ ದೇಶದ ಒಕ್ಕೂಟ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ವಸ್ತುಗಳ ಬೆಲೆ ಏರಿಕೆ ಅಸಂಘಟಿತ ಕಾರ್ಮಿಕರ ಕಾನೂನುಗಳನ್ನು ತೆಗೆದು ಹೊಸ ಸಂಹಿತೆಗಳನ್ನು ಜಾರಿಗೊಳಿಸಿ ಪಡಿತರ, ಆರೋಗ್ಯ, ಶಿಕ್ಷಣದಂತಹ ಕಲ್ಯಾಣಕ್ಕೆ ಹಣ ನೀಡದೆ ದೇಶದ ಸಂಪತನ್ನು ಹಾಗೂ ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡುವ ಮೂಲಕ ಖಾಸಗಿ ಬಂಡವಾಳಗಾರರಿಗೆ ಅನುಕೂಲ ಕಲ್ಪಿಸುತ್ತಿರುವುದರಿಂದ ದೇಶದಲ್ಲಿ ಬಡವರ ಮೇಲೆ ಪ್ರಭುತ್ವ ನಿರಂತರವಾದ ದಮನಕಾರಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ಸ್ವರೂಪದಲ್ಲಿ ಬದಲಾವಣೆ ತರುವ ಮೂಲಕ ಜನರ ಕಲ್ಯಾಣದ ಬದಲಾಗಿ ನಿಯಂತ್ರಣಕ್ಕಾಗಿ ಕಾಯ್ದೆ ಕಾಯಿದೆಗಳನ್ನು ಹಾಗು ನೀತಿಗಳನ್ನು ಜಾರಿಗೊಳಿಸುತ್ತಿರುವುದು ಆತಂಕಕಾರಿಯಾಗಿದೆ ಎಂದರು.
ನೀತಿಗಳು ಕಾರ್ಪೋರೇಟ್ ಕಂಪನಿಗಳಿಗೆ ಲಾಭದಾಯಕವಾಗಿವೆ- ಸರೊವರ್ ಬೆಂಕಿಕೆರೆ.
ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸಂಚಾಲಕ ಸರೋವರ್ ಬೆಂಕಿಕೆರೆ ಮಾತನಾಡಿ ಕಳೆದ 7 ವರ್ಷಗಳಲ್ಲಿ ಸಂವಿಧಾನದಲ್ಲಿ ಅಡಕವಾಗಿರುವ ಸ್ವಾಯತ್ತ ರಾಜ್ಯ ಅಧಿಕಾರವನ್ನು ಮೊಟಕುಗೊಳಿಸಿ ಒಕ್ಕೂಟ ರಾಷ್ಟ್ರದ ಕಲ್ಪನೆಯಿಂದ ಕೇಂದ್ರ ಎನ್ನುವ ಧೋರಣೆಯಿಂದ ಎಲ್ಲಾ ಸ್ಥರಗಳಲ್ಲಿ ಅಧಿಕಾರಗಳನ್ನು ಕೇಂದ್ರಿಕರಿಸಲಾಗುತ್ತಿದೆ. ಕೋವಿಡ್ 19 ಸಂದರ್ಭದಲ್ಲಿ ಒಕ್ಕೂಟ ಸರ್ಕಾರ ತಮಗೆ ಅನುಕೂಲವಾಗಿರುವ ಕೃಷಿ ಕಾಯಿದೆ ತಿದ್ದುಪಡಿ, ಎಪಿಎಂಸಿ ಕಾಯಿದೆ ತಿದ್ದುಪಡಿ, ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ವಿದ್ಯುತ್ ಕಾಯಿದೆ ತಿದ್ದುಪಡಿ, ಕಾರ್ಮಿಕ ಕಾನೂನು ತಿದ್ದುಪಡಿ, ಇತ್ಯಾದಿ ಜನವಿರೋಧಿ ನೀತಿಗಳನ್ನು ಜಾರಿಗೊಳಿಸಿ ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ದಲಿತರ ಮೇಲಿನ ಅಲ್ಲೆಗಳನ್ನು ದ್ವಿಗುಣಗೊಳಿಸಲಾಗುತ್ತಿವೆ.
ಕೋವಿಡ್ ಲಾಕ್‌ಡೌನ್ ನಿಂದ ನಿರುದ್ಯೋಗ ಪ್ರಮಾಣ ಹೆಚ್ಚಾಗಿದ್ದು ಕಳವಳ 1 ವರ್ಷದಲ್ಲಿ 2 ಕೋಟಿ ಉದ್ಯೋಗಗಳು ನಷ್ಠವಾಗಿವೆ. ಆರ್.ಬಿ.ಐ ಹೇಳಿಕೆಯಂತೆ 2020ರಲ್ಲಿ ಬಡವರು ತಮ್ಮ ಬಳಿಯಿರುವ ವಸ್ತುಗಳನ್ನು ಅಡಮಾನ ಮಾಡಿ 2021ರಲ್ಲಿ ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡಿರುತ್ತಾರೆ ಅಂದರೆ ಒಕ್ಕೂಟ ಸರ್ಕಾರ ವಿಶ್ವಸಂಸ್ಥೆಗೆ ನಮ್ಮ ದೇಶದಲ್ಲಿ ಬಡತನ ಮತ್ತು ಅಸಮಾನತೆ ಕಡಿಮೆಯಾಗಿದೆ ಎಂದು ವರದಿ ನೀಡಿದೆ ಇದು ದೇಶದ್ರೋಹವಲ್ಲವೇ.. ಪೆಟ್ರೋಲ್ ಡಿಸೆಲ್ ಬೆಲೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಕುಸಿತ ಕಂಡಿದ್ದರು ದೇಶದಲ್ಲಿ ಬೆಲೆ ಹೇರಿಕೆ ಮಾಡಿ ಗ್ಯಾಸ್ ದರವನ್ನು ಹೆಚ್ಚಿಸಿ ಕೇವಲ 11 ಶ್ರೀಮಂತ ಬಂಡವಾಳಗಾರರಿಗೆ ಕಲ್ಪಿಸಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಕಾರ್ಪೋರೇಟ್ ಕಂಪನಿಗಳ ಆದಾಯ ಹೆಚ್ಚಾಗಿದ್ದು ಜನರ ಆದಾಯ ಕಡಿಮೆಯಾಗಿದೆ ಎಂದರು.
ಕಾರ್ಯಗಾರದ ಅಧ್ಯಕ್ಷತೆಯನ್ನು ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ವಹಿಸಿದ್ದರು. ಬೆಂಗಳೂರು ಜಿಲ್ಲಾ ಸಮಿತಿಯ ಚಂದ್ರಮ್ಮ, ದಾವಣಗೆರೆ ಜಿಲ್ಲಾ ಸಮಿತಿಯ ರೇಣುಕಾಯಲ್ಲಮ್ಮ, ತುಮಕೂರು ಜಿಲ್ಲಾ ಸಮಿತಿಯ ದೀಪಿಕಾ ಚಿತ್ರದುರ್ಗ ಜಿಲ್ಲಾ ಸಮಿತಿಯ ಕೆ.ರಾಜಣ್ಣ ಉಪಸ್ಥಿತರಿದ್ದರು ಮಂಜಣ್ಣ ಸ್ವಾಗತಿಸಿದರೆ. ಕಾವೇರಿ ನಿರೂಪಿಸಿದರು. ಎಂ.ಮಹೇಶ್ ವಂದಿಸಿದರು. ಅರುಣ್ ಮತ್ತು ತಿರುಮಲಯ್ಯ ತಂಡದಿಂದ ಕ್ರಾಂತಿಗೀತೆಗಳನ್ನು ಹಾಡಿದರು. ಮೈಸೂರು ವಿಭಾಗದ ಬೆಂಗಳೂರು, ತುಮಕೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲಾ ಸಮಿತಿಗಳ 50 ಪದಾಧಿಕಾರಿಗಳು ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು.