ತುರುವೇಕೆರೆ :ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್ ಕಾರ್ಮಿಕ ಇಲಾಖೆಯಿಂದ 10 ತಾಲೂಕುಗಳ ಕಾರ್ಮಿಕರಿಗೆ ವಿತರಿಸಲು ನೀಡಲಾದ 2000 ದಿನಸಿಕಿಟ್‌ನ್ನು ಕೇವಲ ತುರುವೇಕೆರೆ ತಾಲೂಕಿನ ತಮ್ಮ ಹಿಂಬಾಲಕರಾದ ಕಾಂಗ್ರೇಸ್ ಕಾರ್ಯಕರ್ತರಿಗೆ ನೀಡುವ ಮೂಲಕ 9 ತಾಲೂಕಿನ ಕಾರ್ಮಿಕರಿಗೆ ದ್ರೋಹವೆಸಗಿದ್ದಾರೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಂ.ಎಲ್.ಸಿ. ಬೆಮೆಲ್ ಕಾಂತರಾಜ್ ರವರಿಗೆ ಜಿಲ್ಲೆಯ ಹತ್ತು ತಾಲೂಕುಗಳ ವ್ಯಾಪ್ತಿಯ ಕಾರ್ಮಿಕರಿಗೆ ಹಂಚುವ ಸಲುವಾಗಿ ಸರಕಾರ 2000 ಕಿಟ್ ಇವರ ಸುಪರ್ದಿಗೆ ನೀಡಿತ್ತು. ಆದರೇ ಬೆಮೆಲ್ ಕಾಂತರಾಜ್ ತುರುವೇಕೆರೆ ಕ್ಷೇತ್ರದ ಕಾರ್ಮಿಕರಿಗೆ ಹಂಚದೇ ತಮ್ಮ ಹಿಂಬಾಲಕರಿಗೆ ಹಂಚಿದ್ದಾರೆ, ಉಳಿದ 9 ತಾಲೂಕುಗಳ ಕಾರ್ಮಿಕರಿಗೆ ಕಿಟ್ ನೀಡದೇ ವಂಚಿಸಿರುವುದು ಅತ್ಯಂತ ಹೇಯಕೃತ್ಯ. ತಮ್ಮ ರಾಜಕೀಯ ಸ್ವಾರ್ಥಕ್ಕೆ ಸರಕಾರಿ ಸವಲತ್ತನ್ನು ದುರ್ಬಳಕೆ ಮಾಡಿಕೊಂಡಿರುವ ಬೆಮೆಲ್ ಕಾಂತರಾಜ್ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕಾದ ಅಗತ್ಯವಿದೆ. ಒಟ್ಟಾರೇ ಜಿಲ್ಲೆಯ ಎಲ್ಲಾ ತಾಲೂಕುಗಳ ಕಾರ್ಮಿಕರಿಗೆ ಸರಕಾರದ ಸವಲತ್ತು ನೀಡದೇ ವಂಚಿಸಿರುವ ಬೆಮೆಲ್ ಕಾಂತರಾಜ್ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳು ತನಿಖೆ ನೆಡೆಸುವಂತೆ ಆಗ್ರಹಿಸಿದರು.
ಕಾರ್ಮಿಕ ಇಲಾಖೆಯ ಆಯುಕ್ತರನ್ನು ಶೀಘ್ರದಲ್ಲಿ ಖುದ್ದು ಭೇಟಿಯಾಗಿ ಎಂ.ಎಲ್.ಸಿ. ಕಾಂತರಾಜ್ ವಿರುದ್ದ ಶಿಸ್ತುಕ್ರಮಕ್ಕೆ ಒತ್ತಾಯಿಸುತ್ತೇನೆ. ತುರುವೇಕೆರೆ ಕ್ಷೇತ್ರದಲ್ಲಿ ನೈಜ ಕಾರ್ಮಿಕರಿಗೆ ಕಿಟ್ ನೀಡದೇ ತಮ್ಮ ಕಾರ್ಯಕರ್ತರಿಗೆ ನೀಡಿದ್ದರೂ ಮೌನವಾಗಿರುವ ಕಾರ್ಮಿಕ ಇಲಾಖೆ ಅದಿಕಾರಿ ಹಾಗೂ ತಹಶೀಲ್ದಾರ್ ವಿರುದ್ದ ಸರಕಾರ ಕ್ರಮ ಕೈಗೊಳ್ಳಲಿ. ಬೆಮೆಲ್ ಕಾಂತರಾಜ್ ಸರಕಾರದ ಸವಲತ್ತನ್ನು ಸ್ವಹಿತಾಸಕ್ತಿಗೆ ಬಳಸಿಕೊಂಡಿರುವ ಬಗ್ಗೆ ವಿಧಾನಪರಿಷತ್ ಅಧ್ಯಕ್ಷರು ಕೂಲಕೂಂಶ ತನಿಖೆ ನೆಡೆಸಲಿ ಎಂದು ಒತ್ತಾಯಿಸಿದರು.
ಗೋಷ್ಟಿಯಲ್ಲಿ ಬಾಣಸಂದ್ರ ಗ್ರಾ.ಪಂ. ಅದ್ಯಕ್ಷ ಆನಂದ್‌ಮರಿಯಾ, ಎ.ಪಿ.ಎಂ.ಸಿ ಸದಸ್ಯ ರೇಣುಕಯ್ಯ,ಜೆ.ಡಿ.ಎಸ್.ಯುವ ಘಟಕದ ಅಧ್ಯಕ್ಷ ರಮೇಶ್, ಜಿ.ಪಂ. ಮಾಜಿಅಧ್ಯಕ್ಷ ಹನುಮಂತಯ್ಯ, ವಕ್ತಾರ ವೆಂಕಟಾಪುರಯೋಗೀಶ್, ತಾಲೂಕು ಎಸ್ಸಿ ಘಟಕದ ಅದ್ಯಕ್ಷ ಮಲ್ಲೂರುತಿಮ್ಮೆಶ್, ಸಿ.ಎಸ್.ಪುರ ಎಸ್ಸಿ ಘಟಕದ ಗೌರವಾದ್ಯಕ್ಷ ಕುಮಾರ್, ಅಧ್ಯಕ್ಷ ಗಿರೀಶ್, ಲಕ್ಷ್ಮೀಕಾಂತ್ ಸೇರಿದಂತೆ ಮತ್ತಿರಿದ್ದರು.