ಜಿಲ್ಲೆತುಮಕೂರುಸುದ್ದಿ
Trending

ತುಮಕೂರು ಜಿಲ್ಲಾ ಹಿಂದುಳಿದ ಸಮುದಾಯಗಳ ಒಕ್ಕೂಟದವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಹಿಂದುಳಿದ ವರ್ಗ ಹಾಗೂ ದಲಿತ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಸಾರ್ವಜನಿಕ ಚರ್ಚೆಗೆ ತನ್ನಿ- ಹೆಚ್.ಎಂ.ರೇವಣ್ಣ

ತುಮಕೂರು : ರಾಜ್ಯದ 197 ಹಿಂದುಳಿದ ವರ್ಗಗಳು ಹಾಗೂ ದಲಿತ ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ತೆರೆದಿಡುವ ನ್ಯಾಯವಾದಿ ಕಾಂತರಾಜು ಅವರ ವರದಿಯನ್ನು ಸರಕಾರ ಈ ಕೂಡಲೇ ಸಾರ್ವಜನಿಕ ಚರ್ಚೆಗೆ ಬಿಡಬೇಕು ಎಂಬುದು ಹಿಂದುಳಿದ ವರ್ಗಗಳ ಒಕ್ಕೋಲರ ಒತ್ತಾಯವಾಗಿದೆ ಎಂದು ಮಾಜಿ ಸಚಿವ ಹೆಚ್.ಎಂ.ರೇವಣ್ಣ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ(ರಿ) ಮತ್ತು ತುಮಕೂರು ಜಿಲ್ಲಾ ಹಿಂದುಳಿದ ಸಮುದಾಯಗಳ ಒಕ್ಕೂಟದವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಒಂದು ದಿನದ ಧರಣಿ ಸತ್ಯಾಗ್ರಹವನ್ನು ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಸುಪ್ರಿಂಕೋರ್ಟಿನ ಮಾರ್ಗದರ್ಶನದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸುಮಾರು 180 ಕೋಟಿ ರೂ ವ್ಯಯ ಮಾಡಿ, ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಗಣತಿ ಮಾಡಿದ್ದಾರೆ. ಇದು ಅತ್ಯಂತ ವೈಜ್ಞಾನಿಕವಾಗಿದೆ ಎಂದರು.
ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ನ್ಯಾಯವಾದಿ ಕಾಂತರಾಜು ಅವರು, ವರದಿ ಸಲ್ಲಿಸಿ ಮೂರು ವರ್ಷ ಕಳೆದರೂ, ವರದಿಯನ್ನು ಜಾರಿಗೆ ತರದೆ ಮೂಲೆಗುಂಪು ಮಾಡಲಾಗಿದೆ.ಇದರ ವಿರುದ್ದ ಈಗಾಗಲೇ ರಾಜ್ಯಾಧ್ಯಂತ ಹಿಂದುಳಿದ ವರ್ಗಗಳ ಒಕ್ಕೂಟದಿಂದ ಹೋರಾಟ ಆರಂಭವಾಗಿದೆ. ಕನಿಷ್ಠ ವರದಿಯಲ್ಲಿ ಅಂಶಗಳ ಕುರಿತು ಸಾರ್ವಜನಿಕ ಚರ್ಚೆಗೆ ಬಿಟ್ಟು, ಅಲ್ಲಿ ಬರುವ ಅಭಿಪ್ರಾಯಗಳನ್ನು ಸಂಗ್ರಹಿಸಿ, ಅಗತ್ಯ ತಿದ್ದುಪಡಿಗಳನ್ನು ತಂದು ಜಾರಿಗೆ ತರಲು ಅವಕಾಶವಿದೆ. ಆದರೆ ಇದನ್ನು ಸರಕಾರಗಳು ಮಾಡುತ್ತಿಲ್ಲ. ಕೋವಿಡ್ ಹೆಸರಿನಲ್ಲಿ ಓಬಿಸಿ ಸಮುದಾಯದ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನ, ವಿದ್ಯಾಸಿರಿ ಸಹಾಯಧನ ಸೇರಿದಂತೆ ಈ ಹಿಂದಿನ ಸರಕಾರಗಳು ನೀಡುತ್ತಿದ್ದ ಅನೇಕ ಸವಲತ್ತುಗಳ್ನು ತಡೆ ಹಿಡಿದಿದೆ. ಇದರ ವಿರುದ್ದ ನಾವೆಲ್ಲರೂ ದ್ವನಿ ಎತ್ತಬೇಕಾಗಿದೆ ಎಂದರು.
ವಿಧಾನಪರಿಷತ್ ಮಾಜಿ ಸದಸ್ಯ ಹಾಗು ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಎಂ.ಡಿ.ಲಕ್ಷಿö್ಮನಾರಾಯಣ್ ಮಾತನಾಡಿ,ರಾಜ್ಯದಲ್ಲಿ ಸುಮಾರು 2.70 ಕೋಟಿಯಷ್ಟಿರುವ ಹಿಂದುಳಿದ ವರ್ಗಗಳ ವಿರುದ್ದವಾಗಿ ನಡೆದುಕೊಳ್ಳುತ್ತಿರುವ ಆಡಳಿತಾರೂಢ ಸರಕಾರದ ವಿರುದ್ದ ನಾವೆಲ್ಲರೂ ಸಿಡಿದೇಳಬೇಕಾಗಿದೆ.
ಇಡೀ ರಾಜ್ಯದ ಎಲ್ಲಾ ಸಮುದಾಯಗಳನ್ನು ಒಳಗೊಂಡAತೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ನೇತೃತ್ವದಲ್ಲಿ ನಡೆದ ಸಾಮಾಜಿಕ, ಶೈಕ್ಷಣಿಕ ಜಾತಿ ಗಣತಿಯ ವರದಿಯನ್ನು ಜಾರಿಗೆ ತರದೆ ರಾಜ್ಯದ 6.50 ಕೋಟಿ ಜನರಿಗೆ ಅಪಮಾನ ಮಾಡಿದೆ.ಇದನ್ನು ನಾವು ಸಹಿಸಲು ಸಾಧ್ಯವಿಲ್ಲ ಎಂದರು.
ಹಿಂದುಳಿದ ವರ್ಗದ ಅ ಮತ್ತು ಬ ಕ್ಯಾಟಗೇರಿಯಲ್ಲಿ ಒಟ್ಟು 197 ಸಮುದಾಯಗಳು ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಜಾರಿಯ ಬಗ್ಗೆ ಒಗ್ಗಟ್ಟು ಪ್ರದರ್ಶಿಸದಿದ್ದಲ್ಲಿ, ಭವಿಷ್ಯದಲ್ಲಿ ಮತ್ತಷ್ಟು ಕರಾಳ ದಿನಗಳನ್ನು ಎಣಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಪ್ರಸ್ತುತ ಅಧಿಕಾರದಲ್ಲಿರುವ ಸರಕಾರ ಕೇವಲ ಎರಡು ಜಾತಿಗಳ ನಿಗಮಗಳಿಗೆ 1000 ಕೋಟಿ ರೂ ನೀಡಿದೆ. ಆದರೆ 197 ಜಾತಿಗಳನ್ನು ಪ್ರತಿನಿಧಿಸುವ ಸುಮಾರು 16 ನಿಗಮಗಳಿಗೆ 500 ಕೋಟಿ ನೀಡಿದೆ. ಇದೇ ನಿಮ್ಮ ಸಾಮಾಜಿಕ ನ್ಯಾಯವೇ ಎಂದು ಪ್ರಶ್ನಿಸಬೇಕಾಗಿದೆ. ಇದರ ವಿರುದ್ದ ಉಗ್ರ ಹೋರಾಟ ನಡೆಸಬೇಕಾಗಿದೆ. ಸರಕಾರದ ಈ ಧೋರಣೆಯ ವಿರುದ್ದೆ ವಿಧಾನಸೌಧ ಮುತ್ತಿಗೆಯಂತಹ ಕಾರ್ಯಕ್ರಮಕ್ಕೂ ನಾವು ಅಂಜಬಾರದು ಎಂದು ಎಂ.ಡಿ.ಲಕ್ಷ್ಮಿನಾರಾಯಣ್ ನುಡಿದರು.
ವಿಧಾನಸಭೆಯ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, 1931ರಲ್ಲಿ ಬ್ರಿಟಿಷ ಆಡಳಿತದಲ್ಲಿ ಜಾತಿಗಣತಿ ನಡೆಸಿದ್ದನ್ನು ಬಿಟ್ಟರೆ, 1974ರಲ್ಲಿ ದೇವರಾಜ ಅರಸು ಅವರು ಅಧಿಕಾರಕ್ಕೆ ಬರುವವರೆಗೂ ಜಾತಿ ಗಣತಿ ನಡೆದಿರಲಿಲ್ಲ.ಅರಸು ಅವರು ಎಲ್.ಜಿ.ಹಾವನೂರು ಅವರ ನೇತೃತ್ವದಲ್ಲಿ ಆಯೋಗ ರಚಿಸಿ, ಅವರು ನೀಡಿದ ವರದಿಯ ಅನ್ವಯ ಅನೇಕ ಕಾಯ್ದೆಗಳನ್ನು ಜಾರಿಗೆ ತಂದ ಪರಿಣಾಮ ಹಿಂದುಳಿದ ವರ್ಗಗಳು ರಾಜಕೀಯ, ಶೈಕ್ಷಣಿಕ ಮೀಸಲಾತಿಯನ್ನು ಪಡೆದು, ಸಾಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ. ಹಾಗಾಗಿ ಕಾಂತರಾಜು ಅವರ ವರದಿಯನ್ನು ಜಾರಿಗೆ ತರುವ ಮೂಲಕ ಈ ಸಮುದಾಯಗಳಿಗೆ ಮತ್ತಷ್ಟು ಸರಕಾರಿ ಸವಲತ್ತುಗಳು ವಿಸ್ತಾರಗೊಳ್ಳಬೇಕಾಗಿದೆ.ಆಡಳಿತದಲ್ಲಿರುವ ಸರಕಾರಗಳು ಮನಸೋಯಿಚ್ಚೆ, ಬಾಹ್ಯ ಒತ್ತಡಕ್ಕೆ ಮಣಿದು, ಕಾನೂನು ಬಾಹಿರ ಮೀಸಲಾತಿ ಹಂಚಿಕೆಯನ್ನು ತಕ್ಷಣವೇ ನಿಲ್ಲಿಸಬೇಕು. ಪ್ರಬಲ ಜಾತಿಗಳನ್ನು 2 ಎ ಪಟ್ಟಿಗೆ ಸೇರಿಸುವ ಪ್ರಕ್ರಿಯೆಯನ್ನು ಕೂಡಲೇ ಕೈಬೀಡಬೇಕೆಂದು ಆಗ್ರಹಿಸಿದರು.
ಸತ್ಯಾಗ್ರಹ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ನೇಕಾರ ಸಮುದಾಯದ ದೊಡ್ಡ ಬಳ್ಳಾಪುರ ಮಠದ ಶ್ರೀಶ್ರೀ ದಿವ್ಯ e್ಞÁನಾನಂದಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ಹಿಂದುಳಿದ ಸಮುದಾಯದಲ್ಲಿರುವ ಎಲ್ಲಾ ಜಾತಿಗಳು ಈ ಹೋರಾಟದಲ್ಲಿ ಹೆಗಲಿಗೆ, ಹೆಗಲು ಕೊಟ್ಟು ದುಡಿಯಬೇಕಿದೆ.ನಿಮ್ಮ ಹೋರಾಟದಿಂದ ಸೌಲಭ್ಯ ವಂಚಿತ ವಿದ್ಯಾರ್ಥಿಗಳಿಗೆ, ಶೋಷಿತರಿಗೆ ನ್ಯಾಯ ಸಿಗುವಂತಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ(ರಿ) ಅಧ್ಯಕ್ಷ ಕೆ.ಎಂ.ರಾಮಚAದ್ರಪ್ಪ ಹಾಗೂ ಪದಾಧಿಕಾರಿಗಳು, ತುಮಕೂರು ಜಿಲ್ಲೆಯ ಪದಾಧಿಕಾರಿಗಳು ಸಲ್ಲಿಸಿದರು.ಸತ್ಯಾಗ್ರಹದಲ್ಲಿ ಮಾಜಿ ಶಾಸಕ ಡಾ.ರಫೀಕ್ ಅಹಮದ್, ಎಸ್.ನಾಗಣ್ಣ, ಪಿ.ಎನ್.ರಾಮಯ್ಯ,ನರಸೀಯಪ್ಪ, ಆರ್.ವೇಣುಗೋಪಾಲ್,ಅಡಿಟರ್ ಅಂಜನಪ್ಪ, ಸುರೇಶ್ ಲಾತೂರ್, ನಿಕೇತ್ ರಾಜ್ ಮೌರ್ಯ, ರಾಮಚಂದ್ರಪ್ಪ, ಧನಿಯಕುಮಾರ್ ಸೇರಿದಂತೆ ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಸತ್ಯಾಗ್ರಹದಲ್ಲಿ ತುಮಕೂರು ಜಿಲ್ಲಾ ಹಿಂದುಳಿದ ಸಮುದಾಯದ ಒಕ್ಕೂಟದ ಸಂಚಾಲಕರಾದ ಧನಿಯಕುಮಾರ್, ಪ್ರೆಸ್ ರಾಜಣ್ಣ, ಕೆಂಪರಾಜು, ಮಧುಕರ್,ವಿರೂಪಾಕ್ಷ,ವಿವಿಧ ಸಮುದಾಯದ ಮುಖಂಡರಾದ ಟಿ.ಎಲ್.ಕುಂಭಯ್ಯ,ಲಕ್ಷö್ಮಣ್, ಶಾಂತಕುಮಾರ್,ಮಂಜೇಶ್, ಪುಟ್ಟರಾಜು, ತಿಪ್ಪೇಸ್ವಾಮಿ, ನಾಗರಾಜು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

 

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker