ಕುಣಿಗಲ್ : ಹೆರಿಗೆಯಾದ ಮಹಿಳೆಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವುದಕ್ಕಾಗಿ ವೈದ್ಯರೊಬ್ಬರು ಲಂಚಕೇಳಿದ್ದರಿಂದ ಮಹಿಳೆಯ ಸಂಬಂಧಿಕರು ಹಾಗೂ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ತಪ್ಪಿತಸ್ಥ ವೈದ್ಯರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಪ್ರತಿಭಟನೆ ನಡೆಸಿದ ಘಟನೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಮುಂಭಾಗ ನಡೆದಿದೆ.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಧನುಷ್ ಮಾತನಾಡಿ ಪಟ್ಟಣದ ಗುಜ್ಜಾರಿ ಮೊಹಲ್ಲಾದ ಇಮ್ರಾನ್ ಪತ್ನಿ ಆಸ್ರಿನ್ ತಾಜ್ ರವರಿಗೆ ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ ಅದೇ ದಿನ ಒಂಭತ್ತು ಹೆರಿಗೆಯಾಗಿದ್ದು ಅದರಲ್ಲಿ ಎಂಟು ಸಿಜೇರಿಯನ್ ಮಾಡಿದ್ದಾರೆ ಇದು ಉದ್ದೇಶ ಪೂರ್ವಕ ಮತ್ತು ವೈದ್ಯರು ಹಣಕ್ಕಾಗಿ ಮಾಡಿದ್ದಾರೆಂದು ವೈದ್ಯರಾದ ಹರೀಶ್ ರವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹೆರಿಗೆಯಾದ ಆಸ್ರಿನ್ ತಾಜ್ ಪತಿಯಾದ ಇಮ್ರಾನ್‍ಗೆ 13 ಸಾವಿರ ಹಣ ನೀಡಲು ಒತ್ತಾಯಿಸಿದ್ದು ಫೋನ್ ಪೇ ಮಾಡುವಂತೆ ಲಂಚದ ಬೇಡಿಕೆ ಇಟ್ಟಿದ್ದಾರೆ ಇದು ಆಸ್ಪತ್ರೆಯಲ್ಲಿ ದಿನನಿತ್ಯ ನಡೆಯುವ ದಂಧೆಯಾಗಿದೆ ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ತುಮಕೂರು ಡಿ.ಹೆಚ್.ಒ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತಪ್ಪಿತಸ್ಥ ವೈದ್ಯರ ವಿರುದ್ದ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಸಂಬಂಧ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಗಳಾದ ಗಣೇಶ್ ಬಾಬು ಅವರ ಜತೆ ಗಂಭೀರವಾಗಿ ಚರ್ಚೆನಡೆಸಿದ್ದಾರೆ. ಈ ಸಂಧರ್ಭದಲ್ಲಿ ಸಲ್ಮಾನ್, ಇಮ್ರಾನ್ ಮತ್ತು ಅನುಫ್ ಹಾಗೂ ಯುವ ಮೋರ್ಚಾ ಪದಾಧಿಕಾರಿಗಳು ಇದ್ದರು.