ಕುಣಿಗಲ್:ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿ ಕೊಡವತ್ತಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಸಮಾಜ ಸೇವೆಯಲ್ಲಿ ತೊಡಗಿರುವ ಬಾ ನಾ ರವಿ ಪತ್ರಿಕೆಯೊಂದಿಗೆ ಮಾತನಾಡಿ ಕೊಡವತ್ತಿ ಗ್ರಾಮ ಪಂಚಾಯಿತಿಯಲ್ಲಿ ವಿದ್ಯಾಭ್ಯಾಸಗೊತ್ತಿಲ್ಲದಿರುವ ಹಾಗೂ ಅನಾಗರಿಕರ ರೀತಿ ವರ್ತಿಸುವ ಪಂಚಾಯಿತಿ ಅಭಿ ವೃದ್ಧಿ ಅಧಿಕಾರಿ ನಾಗರಾಜು ಪಂಚಾಯಿತಿ ಕರ್ತವ್ಯಕ್ಕೆ ಸಮರ್ಪಕವಾಗಿ ಬರುವುದಿಲ್ಲ ವಾರದಲ್ಲಿ ೩ದಿನ ಬಂದರೆ ಹೆಚ್ಚು ಬಂದರೂ ೧ಗಂಟೆ ಇರುವುದೇ ಹೆಚ್ಚು ಗ್ರಾಮ ಪಂಚಾಯಿತಿಯ ನಿಯಮಗಳೇ ಗೊತ್ತಿಲ್ಲ ಏನನ್ನಾದರೂ ಪ್ರಶ್ನೆ ಮಾಡಿದರೆ ಅಣ್ಣ ಅಪ್ಪ ಎಂದು ಕೈಹಿಡಿದು ಹಾರಿಕೆ ಉತ್ತರ ನೀಡುತ್ತಾರೆ.
ಆಡಳಿತ ಮಂಡಳಿ ಅಧಿಕಾರಕ್ಕೆ ಬಂದು ಸುಮಾರು ೮ ತಿಂಗಳು ಕಳೆದರೂ ಸಾರ್ವಜನಿಕರಿಗೆ ಯಾವುದೇ ಕೆಲಸಗಳನ್ನು ಮಾಡಿಕೊಡಲು ಆಗುತ್ತಿಲ್ಲ ಸರ್ಕಾ ರದ ನಿಯಮಾನುಸಾರ ಪಂಚಾಯಿತಿ ಸಭೆಯನ್ನು ತಿಂಗಳಿಗೆ ಒಮ್ಮೆ ಮಾಡಬೇಕೆಂದು ನಿಯಮವಿದ್ದರೂ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರುತ್ತಾ ಪಂಚಾಯಿತಿ ಅಧಿಕಾರಕ್ಕೆ ಬಂದು ಏಳೆಂಟು ತಿಂಗಳು ಕಳೆದರೂ ಇಲ್ಲಿಯವರೆಗೂ ೩ಸಭೆಗಳು ಆಗಿವೆ ಆದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಳ ನಿರ್ಲಕ್ಷ÷್ಯದಿಂದ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯ ವಾಗು ತ್ತಿಲ್ಲ ಹೀಗಾಗಿ ಪಂ ಚಾಯಿತಿಯಲ್ಲಿ ಎಲ್ಲಾ ಕೆಲಸಗಳು ನೆನೆಗುದಿಗೆ ಬಿದ್ದಿವೆ ಈಗಾದರೆ ನಮ್ಮ ಮೇಲೆ ನಂಬಿಕೆ ಇಟ್ಟು ಮತ ಹಾಕಿ ಚುನಾವಣೆ ಯಲ್ಲಿ ಗೆಲ್ಲಿಸಿದ ಜನರಿಗೆ ಏನು ಉತ್ತರ ನೀಡುವುದು,ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ಬರುವ ವೈಯಕ್ತಿಕ ಕಾಮಗಾರಿಗಳಿಗೆ ಸಾರ್ವಜನಿಕರು ಅರ್ಜಿ ನೀಡಿದರೆ ಪಂಚಾಯಿತಿ ಕಚೇರಿಯಲ್ಲಿ ಅರ್ಜಿ ಗಳೇ ಮಾಯವಾಗುತ್ತವೆ ಕೇಳಿದರೆ ಮತ್ತೊಮ್ಮೆ ಮಗದೊಮ್ಮೆ ಕೊಡಿ ಎಂದು ಉತ್ತರ ನೀಡುತ್ತಾ ಸಾರ್ವಜನಿಕರನ್ನು ಪಂಚಾಯಿತಿಗೆ ಅಲೆಸುತ್ತಾರೆ ನರೇಗಾ ಯೋಜನೆಯಡಿ ರೈತರು ಕಾಮಗಾರಿ ಕೈಗೊಳ್ಳಲು ಸುಮಾರು ಅರ್ಜಿಗಳನ್ನು ನೀಡಿದ್ದರು ಇಲ್ಲಿಯವರೆಗೂ ಎನ್ ಎಂ ಆರ್ ತೆಗೆದಿರುವುದಿಲ್ಲ ಸಮರ್ಪಕವಾಗಿ ಜಿಪಿಎಸ್ ಮಾಡುತ್ತಿಲ ನರೇಗಾ ಎಂಜಿನಿಯರ್ ಯಾರು ಎಂಬುದು ಗೊತ್ತಿಲ್ಲ. ಮನೆ ಮತ್ತು ಖಾಲಿ ನಿವೇಶನಗಳ ಈ ಸ್ವತ್ತಿನ ಖಾತೆ ಮಾಡಲು ಇಪ್ಪತ್ತೆöÊದಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ ಯಾವುದನ್ನು ಮಾಡಿರುವುದಿಲ್ಲ ಕಂಪ್ಯೂಟರ್ ಜ್ಞಾನ ಇರುವ ಯಾವುದೋ ಒಬ್ಬ ವ್ಯಕ್ತಿಯನ್ನು ಕುಣಿಗಲ್ ನಿಂದ ಹುಲಿಯೂರುದುರ್ಗ ಪ್ರವಾಸಿ ಮಂದಿರಕ್ಕೆ ಕರೆಸಿ ಈ ಸ್ವತ್ತಿನ ಹಾ ಗೂ ಇತರೆ ಕೆಲಸಗಳನ್ನು ಮಾಡಿಸುತ್ತಾರೆ ಗ್ರಾಮ ಪಂಚಾಯಿತಿಯಲ್ಲಿ ಶ್ರೀಕಾಂತ್ ಎಂಬ ನೌಕ ರರನ್ನು ಹೊರತುಪಡಿಸಿ ಯಾರೊಬ್ಬರೂ ಸಮ ರ್ಪಕವಾಗಿ ಪಂಚಾಯಿತಿ ಕಚೇರಿಗೆ ಬಂದು ಕೆಲಸ ನಿರ್ವಹಿಸುವುದಿಲ್ಲ ವೈಯಕ್ತಿಕ ಕೆಲಸಗಳಲ್ಲಿ ಮಗ್ನರಾಗುತ್ತಾರೆ ಎಂದು ಆರೋಪಿಸಿದರು.
ಸಾರ್ವಜನಿಕರು ಮನೆ, ನೀರು, ಇತರೆ ಕಂದಾ ಯಗಳನ್ನು ಪಂಚಾಯಿತಿಗೆ ಕಟ್ಟಿದರೆ ಆ ಹಣವನ್ನು ನಿಗದಿತ ವೇಳೆಗೆ ಬ್ಯಾಂಕಿಗೆ ಸಂದಾಯ ಮಾಡದೆ ಸರ್ಕಾರದ ಹಣವನ್ನು ದುರುಪಯೋಗ ಪಡಿಸಿ ಕೊಳ್ಳುತ್ತಿದ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಯಲ್ಲಿ ಸುಮಾರು ೫ ಜಿಯೋ, ಏರ್ಟೆಲ್ ಮೊಬೈಲ್ ಟವರ್‌ಗಳು ಇವೆ ಯಾರೊಬ್ಬರೂ ಪಂಚಾಯಿತಿ ಯಿಂದ ಅನುಮತಿ ಪಡೆದಿರುವುದಿಲ್ಲ ಇದರಿಂದ ಪಂಚಾಯಿತಿ ಕಚೇರಿಗೆ ಬರುವ ತೆರಿಗೆ ಹಣ ಪೋಲಾಗುತ್ತಿದೆ ಇತ್ತೀಚೆಗೆ ಬಂಡಿಹಳ್ಳಿ ಗ್ರಾಮದಲ್ಲಿ ಮೊಬೈಲ್ ಟವರ್ ನವರು ಕೇಬಲ್ ಹಾಕಲು ರಸ್ತೆ ಅಗೆಯುತ್ತಿದ್ದರು ನಾನು ಅನುಮತಿ ಪತ್ರ ಕೊಡಿ ಎಂದ ಕೇಳಿದಾಗ ತಬ್ಬಿಬ್ಬಾದರು ಅವರ ಬಳಿಯಲ್ಲಿ ಯಾವುದೇ ದಾಖಲೆಗಳು ಕಂಡುಬರಲಿಲ್ಲ ಆಗ ಮೊಬೈಲ್ ಟವರ್ ಕಡೆಯಿಂದ ಸುಮಾರು ೨ ಲಕ್ಷ ೯೧ ಸಾವಿರ ಹಣವನ್ನು ತೆರಿಗೆ ರೂಪದಲ್ಲಿ ಪಂಚಾ ಯಿತಿಗೆ ಕಟ್ಟಿಸಿದೆ. ಮೊಬೈಲ್‌ಟವರ್‌ಗಳಿಂದ ವ ರ್ಷಕ್ಕೊಮ್ಮೆ ಪಂಚಾಯಿತಿಗೆ ಇಂತಿಷ್ಟೆAದು ತೆರಿಗೆ ಹಣ ಕಟ್ಟಬೇಕು ಆದರೆ ಇವತ್ತಿನವರೆವಿಗೂ ೧ ನಯಾಪೈಸೆಯೂ ಪಂಚಾಯಿತಿಗೆ ಸಂದಾಯ ವಾಗಿರುವುದಿಲ್ಲ ಈ ಹಣವೆಲ್ಲ ಎಲ್ಲಿ ಹೋಗುತ್ತದೆ ಎಂದು ಪ್ರಶ್ನಿಸಿದರು.
ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಇಂಟರ್ನೆಟ್ ಕೆಟ್ಟು ೧ವರ್ಷವಾಗಿದೆ ಇಲ್ಲಿಯವರೆಗೂ ಅಧಿಕಾರಿಗಳು ಸರಿಪಡಿಸುವ ಗೋಜಿಗೇ ಹೋಗಿರುವುದಿಲ್ಲ ಈಗಾದರೆ ನಮ್ಮ ಮೇಲೆ ನಂಬಿಕೆಯಿಟ್ಟು ಮತ ಹಾಕಿ ಗೆಲ್ಲಿಸಿರುವ ಮತದಾರರಿಗೆ ನಾವು ಉ ತ್ತರವನ್ನು ನೀಡಲು ಸಾಧ್ಯವಾಗುತ್ತಿಲ್ಲ ನಮ್ಮ ಗ್ರಾಮವಾದ ಬಂಡಿಹಳ್ಳಿಯಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿ ನರೇಗಾ ಯೋಜನೆಯಡಿ ಗ್ರಾಮ ಪಂಚಾಯಿತಿಯಿAದ ಲಭ್ಯವಾಗುವ ಕೆಲಸಗಳನ್ನು ಕೊಡಿಸುತ್ತೇವೆ ಎಂದು ಸುಮಾರು೧೨ ೫ಅರ್ಜಿ ಗಳನ್ನು ಸಂಗ್ರಹಿಸಿ ಪಂಚಾಯಿತಿ ಕಚೇರಿಗೆ ಕೊಟ್ಟರೆ ಇಲ್ಲಿಯವರೆಗೂ ಯಾವುದೇ ಕೆಲಸ ಆಗಿರುವುದಿಲ್ಲ ಜನರಿಗೆ ನಾವು ಹೇಗೆ ಮುಖ ತೋರಿಸುವುದು ಹಾಗೂ ನಮ್ಮ ಗ್ರಾಮ ಪಂಚಾಯಿತಿ ತಾಲ್ಲೂಕಿನ ಕೊನೆಯ ಅಂಚಿನಲ್ಲಿರುವುದರಿAದ ರೈತರಿಗೆ ನೇರ ಸಂಪರ್ಕ ಹೊಂದಿರುವ ಸರಕಾರದ ಮುಖ್ಯ ಇಲಾಖೆಗಳಾದ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ,ರೇಷ್ಮೆ ಇಲಾಖೆ ತಾಲ್ಲೂಕು ಹಾಗೂ ಹೋಬಳಿ ಮಟ್ಟದ ಅಧಿಕಾರಿಗಳು ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಭೇಟಿ ಕೊಟ್ಟು ಸರ್ಕಾರ ರೈತರಿಗೆ ನೀಡುವ ಸವಲತ್ತುಗಳ ಸಮರ್ಪಕವಾದ ಮಾಹಿತಿ ನೀಡುವುದಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡ ಅವರು ಗ್ರಾಮ ಪಂಚಾಯಿತಿ ಅವ್ಯವಸ್ಥೆಯನ್ನು ನೋಡಿ ಬೇಸರವಾಗಿದೆ, ತಾ ಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿ ಕಾರಿ ಜೋಸೆಫ್ ಅವರ ಮುಂದೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರಾಜು ರವರನ್ನು ೩ಬಾರಿ ಅವರ ಕೊಠಡಿಗೆ ಕರೆಸಿ ಬುದ್ದಿ ಹೇಳಿಸಿದರು ಅಧಿಕಾರಿ ಯಾರ ಮಾತನ್ನು ಕೇಳುತ್ತಿಲ್ಲ ತಕ್ಷಣ ಈತನನ್ನು ನಮ್ಮ ಪಂಚಾಯಿತಿಯಿAದ ಬೇರೆ ಕಡೆಗೆ ವರ್ಗಾವಣೆ ಮಾಡಿ ಎಂದು ಇಒವರ ಬಳಿ ಮನವಿ ಮಾಡಿದ್ದೇನೆ ಮನಸ್ಸಿಗೆ ತುಂಬಾ ಬೇಸರ ಉಂಟಾಗಿದೆ ಎಂದರು.