ವರದಿ: ರೇಣುಕಾ ಪ್ರಸಾದ್
ಕುಣಿಗಲ್: ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ಯಲಿಯೂರು ಕೆರೆ ಹಿಂಭಾಗ ಆಂಜನೇಯ ದೇವಸ್ಥಾನದಿಂದ ಹಿಡಿದು ಹೊನ್ನಾದೇವಿ ಅಮ್ಮನವರ ದೇವಸ್ಥಾನದವರೆಗೂ ಕೆರೆಯ ಏರಿಯ ಬುಡಕ್ಕೆ ನೆಟ್ಟಿದ್ದ 18 ವಿದ್ಯುತ್ ಕಂಬಗಳು ಭಾರಿ ಮಳೆ ಹಾಗೂ ಗಾಳಿಗೆ ನೆಲಕಚ್ಚಿವೆ. ಹೆಸರು ಹೇಳಲು ಇಚ್ಛಿಸದ ಕೆಲವು ಸಾರ್ವಜನಿಕರು ಕೆರೆಯ ಏರಿ ಬುಡಕ್ಕೆ ಬೆಸ್ಕಾಂ ಇಲಾಖೆ ವಿದ್ಯುತ್ ಕಂಬ ಹಾಕಿರುವುದುಅವೈಜ್ಞಾನಿಕ ಆದ್ದರಿಂದ ಕಂಬಗಳು ಮುರಿದಿವೆ ಅದೃಷ್ಟವಶಾತ್ ರಾತ್ರಿ ವೇಳೆಯಲ್ಲಿ ಕಂಬಗಳು ಧರೆಗೆ ಉರುಳಿವೆ ಯಾವುದೇ ಅಪಾಯ ಸಂಭವಿಸಿಲ್ಲ ಮತ್ತು ಕೆಲವು ವಿದ್ಯುತ್ ಕಂಬಗಳಿಗೆ ಗಿಡಗಂಟಿಗಳು ಬೆಳೆದು ಕಂಬಗಳೇ ಕಾಣದಾಗಿವೆ ಬೆಸ್ಕಾಂ ಇಲಾಖೆ ನೌಕರರು ನೋಡಿಯೂ ನೋಡದಂತೆ ಹೋಗುತ್ತಾರೆ ಇದರಿಂದ ಜನರಿಗೆ ಏನಾದರೂ ಅಪಾಯ ಸಂಭವಿಸಿದರೆ ಯಾರು ಜವಾಬ್ದಾರರು ಎಂದು ಜೆಸ್ಕಾಂ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು ಪಿಡಬ್ಲ್ಯುಡಿ ಇಲಾಖೆ ವತಿಯಿಂದ ನಡೆಯುತ್ತಿರುವ ರಸ್ತೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ ಕಂಬಗಳು ಬೀಳುವುದಕ್ಕೆ ಇದು ಒಂದು ಕಾರಣವೆ ರಸ್ತೆ ಕಾಮಗಾರಿ ಸಂಬಂಧಿಸಿದಂತೆ ಇಲಾಖೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಹಾರಿಕೆ ಉತ್ತರ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.