
ತುಮಕೂರು: ದೇಶಕ್ಕೆ ಸ್ವಾತಂತ್ರ ಬಂದ ೭೪ ವರ್ಷ ಕಳೆದರೂ ಯಾವುದೇ ಸಾಮಾಜಿಕ, ಶೈಕ್ಷಣಿಕ,ಆರ್ಥಿಕ ಬದಲಾವಣೆ ಯನ್ನು ಕಾಣದೆ ಇರುವುದು ಪರಿಶಿಷ್ಟ ಜಾತಿ, ಪಂಗಡ, ಹಿಂದು ಳಿದ ವರ್ಗಗಳ ಜನರು ಸಮಾನತೆಗಾಗಿ ಎತ್ತಿರುವ ಈ ದ್ವನಿ ದೊಡ್ಡದಾಗಬೇಕು ಎಂದು ಮಾಜಿ ಉಪಮು ಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರದ ಹರ್ಬನ್ ರೆಸಾರ್ಟ್ನಲ್ಲಿ ಅತಿಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಹಾಗೂ ತುಮಕೂರು ಜಿಲ್ಲಾ ಹಿಂದುಳಿದ ಸಮುದಾಯಗಳ ಒಕ್ಕೂಟ ಜಂಟಿಯಾಗಿ ಆಯೋಜಿಸಿದ್ದ ಹಿಂದುಳಿದ ವರ್ಗ ಗಳ ಜಾಗೃತಿ ಸಮಾವೇಶಕ್ಕೆ ಚಾಲನೆ ನೀಡಿ ಮಾ ತನಾಡುತಿದ್ದ ಅವರು,ಸ್ವಾತಂತ್ರ ನಂತರದಲ್ಲಿ ಹಿಂದುಳಿದ ವರ್ಗಗಳ ಸಮಗ್ರ ಅಧ್ಯಯನಕ್ಕೆಂದು ನೇಮಕವಾಗದ ಆಯೋಗಗಳು ಒಂದಕ್ಕೊAದು ತಾಳೆಯಿಲ್ಲದೆ ಅಂಕಿ ಅಂಶಗಳನ್ನು ನೀಡಿ,ಸಾಕಷ್ಟು ಗೊಂದಲಗಳನ್ನು ಉಂಟು ಮಾಡಿವೆ. ಇದನ್ನೇ ಲಾಭ ಮಾಡಿಕೊಂಡ ಆಳುವ ಸರಕಾರಗಳು ಹಿಂದು ಳಿದ ವರ್ಗಗಳ, ಅದರಲ್ಲಿಯೂ ಅತಿ ಹಿಂದುಳಿದ ವರ್ಗಗಳನ್ನು ಮೀಸಲಾತಿಯಿಂದ ವಂಚಿಸುತ್ತಲೇ ಬಂದಿವೆ. ಹಾಗಾಗಿ ಸಮಾನತೆಯ ಈ ಕೂಗು ಮತ್ತಷ್ಟು ಗಟ್ಟಿಗೊಳ್ಳಬೇಕಾಗಿದೆ ಎಂದರು.
ಒAದೇಡೆ ಹಂತ ಹಂತವಾಗಿ ಸರಕಾರಿ ಸಂಸ್ಥೆ ಗಳು ಖಾಸಗೀಕರಣಗೊಳ್ಳುತ್ತಿವೆ. ಇನ್ನೊಂ ದಡೆ ಹೊರಗುತ್ತಿಗೆ ಎಂಬ ಪೆಡಂಭೂತ ಯಾವುದೇ ಭದ್ರತೆಯಿಲ್ಲದೆ ಯುವಜನರು, ಅದರಲ್ಲಿ ಯೂ ಎಸ್ಸಿ, ಎಸ್ಟಿ, ಒಬಿಸಿ ಯುವಜನತೆ ದುಡಿಯುತ್ತಿರು ವುದನ್ನು ಗಮನಿಸಿದರೆ, ಆಳುವ ವರ್ಗಗಳು ಈ ಜನಾಂಗವನ್ನು ಸರಕಾರಿ ನೌಕರರಿಯಿಂದ ದೂರ ಇಡಲು ನಡೆಸಿದ ಹುನ್ನಾರ ಎಂಬ ಅನುಮಾನ ನಮ್ಮೆಲ್ಲರನ್ನು ಕಾಡುತ್ತಿದೆ. ಭಾರತದಲ್ಲಿ ದಲಿತರು ಮಾತ್ರ ಅಪಮಾನಕ್ಕೆ ಒಳಗಾಗುತ್ತಿಲ್ಲ.ಹಿಂದುಳಿದ, ಅದರಲ್ಲಿಯೂ ಅತಿ ಹಿಂದುಳಿದ, ಕುಲಕಸುಬನ್ನೇ ನಂಬಿಕೊAಡು ಬದುಕುತಿದ್ದ ನೂರಾರು ಸಮು ದಾಯಗಳು ಸಹ ಅಪಮಾನಕ್ಕೆ ಒಳಗಾಗುತ್ತಿವೆ. ಇ ದರ ವಿರುದ್ದ ಪ್ರಭಲವಾಗಿ ದ್ವನಿ ಎತ್ತಬೇಕಾಗಿದೆ.ಯಾವುದೇ ಹೋರಾಟವಿಲ್ಲದೆ ಶೇ೩ರಷ್ಟು ಜನ ಶೇ೧೦ ಮೀಸಲಾತಿಯನ್ನು ಕಾನೂನಾತ್ಮಕವಾಗಿ ಪಡೆದಿರುವಾಗ, ಶೇ೫೨ರಷ್ಟಿರುವ ನಾವುಗಳು ಏಕೆ ಮೀಸಲಾತಿಗಾಗಿ ಅಂಗಲಾಚಬೇಕು. ಇದನ್ನು ಪ್ರತಿ ಯೊಬ್ಬ ಯುವಜನರು ಅರ್ಥ ಮಾಡಿಕೊಂಡು ಮುನ್ನಡೆಯಬೇಕಾಗಿದೆ ಎಂದರು.
ಕರ್ನಾಟಕ ರಾಜ್ಯ ಶಾಶ್ವತ ಹಿಂದುಳಿದ ಆ ಯೋಗದ ಮಾಜಿ ಅಧ್ಯಕ್ಷ ಕಾಂತರಾಜು ಮಾತನಾಡಿ, ಹಿಂದು ಳಿದ ಜಾತಿಗಳ ಇಂದಿನ ಸ್ಥಿತಿಗೆ ನಾವುಗಳೇ ಕಾರಣ. ಸಂವಿಧಾನ ನಮಗೆ ಏನು ನೀಡಿದೆ. ಅದರಲ್ಲಿ ನಾವು ಪಡೆದಿರುವುದು ಎಷ್ಟು ಎಂಬುದನ್ನು ಸರಿ ಯಾಗಿ ತಿಳಿದುಕೊಂಡು,ಮೌನಕ್ಕೆ ಶರಣಾಗಿದ್ದೇ ಕಾರಣ. ನೂನ್ಯತೆ ಎಲ್ಲಿದೆ ಎಂದು ಮೊದಲು ಪತ್ತೆ ಹಚ್ಚಿ, ಹೋರಾಟ ಆರಂಭಿಸಬೇಕಾಗಿದೆ. ದಲಿತರಿಗೆ ಮೀಸಲಾತಿ ಸಿಕ್ಕಿ ೭೩ ವರ್ಷ ಕಳೆದರೂ ಅವರಿಗೆ ದಕ್ಕಿರುವುದು ಶೇ ೯.೦೮ ಮಾತ್ರ, ೧೯೯೬ರಲ್ಲಿ ಉ ದ್ಯೋಗದಲ್ಲಿ, ೨೦೦೮ರಲ್ಲಿ ಶಿಕ್ಷಣದಲ್ಲಿ ಹಿಂದು ಳಿದ ವರ್ಗದವರಿ ಮೀಸಲಾತಿ ದೊರೆತರು ಇದುವರೆಗೂ ಲಭ್ಯವಾಗಿರುವುದು ಶೇ ೨.೫ರಷ್ಟು ಮಾತ್ರ. ಐಐಟಿ, ಐಐಎಂ ನಂತಹ ಶಿಕ್ಷಣ ಸಂಸ್ಥೆಗಳಲ್ಲಿ ತಳಸಮು ದಾಯಗಳ ಶೇ೯೮ರಷ್ಟು ಹುದ್ದೆಗಳ ಖಾಲಿ ಇವೆ ಇವುಗಳ ವಿರುದ್ದ ನಾವೆಲ್ಲರೂ ದ್ವನಿ ಎತ್ತಬೇಕಾಗಿದೆ ಎಂದರು.
ಹಿAದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ಮಾತನಾಡಿ, ಪರಿಶಿಷ್ಟ ಜಾತಿಯಲ್ಲಿ ಅಸ್ಪೃಷ್ಯರು ಒಂದು ರೀತಿ ಯ ಸಮಸ್ಯೆ ಎದುರಿಸುತ್ತಿದ್ದರೆ, ಒಬಿಸಿಯಲ್ಲಿ ಗೋ ಚರವೇ ಆಗದ ಅನೇಕ ಸಮುದಾಯಗಳಿವೆ. ಅವು ಗಳನ್ನು ಪ್ರತಿನಿಧಿಸುವವರು ಯಾರು ಎಂಬ ಪ್ರಶ್ನೆ ಬೃಹದಾಕಾರವಾಗಿ ನಮ್ಮ ಮುಂದಿದೆ.ಇAತಹ ಹೊತ್ತಿನಲ್ಲಿ ಪ್ರಬಲ ಜಾತಿಗಳ ೨ ಎ ಜಾತಿ ಪಟ್ಟಿಗೆ ಸೇರಲು ಪೈಪೋರ್ಟಿ ನಡೆಸುತ್ತಿರುವುದನ್ನು ನೋಡಿದರೆ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ತಬ್ಬಲಿಗಳಾಗಿರುವ ಈ ಸಮುದಾಯ ಗಳ ಪಾಡೇನು.ಅದಕ್ಕಾಗಿ ಇದರ ವಿರುದ್ದ ನ್ಯಾಯಾ ಲಯದ ಮೆಟ್ಟಿಲು ಹತ್ತಿದ್ದೇವೆ ಎಂದರು.
ಸAವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ದಲಿತರಿಗೆ ಶೇ೧೮ರಷ್ಟು ಮೀಸಲಾತಿ ನೀಡಿದರೆ, ಒಬಿಸಿಯವರಿಗೆ ಶೇ೩೨ರಷ್ಟು ಮೀಸಲಾತಿ ನೀಡಿದರು. ಆದರೆ ಬಾಬಾ ಸಾಹೇಬ್ ಅಂಬೇ ಡ್ಕರ್ ಅವರನ್ನು ಯಾವೊಬ್ಬ ಹಿಂದುಳಿದ ವರ್ಗದವರು ನೆನಪು ಮಾಡಿಕೊಳ್ಳುತ್ತಿಲ್ಲ.ಇದು ದುರ್ದೈವ, ೨೦೦೬ರಲ್ಲಿ ಕೋಲಾರದಲ್ಲಿ ಆರಂಭ ವಾದ ಅಹಿಂದ ಚಳವಳಿಯ ಮುಂದುವರೆದ ಭಾಗ ಇಂದಿನ ಜಾಗೃತಿ ಸಮಾವೇಶ.ಎಂತಹ ತ್ಯಾಗಕ್ಕಾದರೂ ನಾವೆಲ್ಲರೂ ಸಿದ್ದರಾಗಬೇಕಾಗಿದೆ ಎಂದು ಡಾ.ಸಿ.ದ್ವಾರಕಾನಾಥ್ ತಿಳಿಸಿದರು.
ಮುಖ್ಯಮಂತ್ರಿ ಚಂದ್ರು ಮಾತನಾಡಿ,ಕುಲವೃತ್ತಿಂiÀiನ್ನು ನಂಬಿ ಬದುಕುತಿದ್ದ ಶ್ರಮಜೀವಿಗಳಿಗೆ ರಾಜಕೀಯ ಅಧಿಕಾರ ಸಿಗದ ಹೊರತು ಗುಲಾಮಗಿರಿಯಿಂದ ಮುಕ್ತರಾಗಲು ಸಾಧ್ಯವಿಲ್ಲ.ಶೇ೫೨ರಷ್ಟಿರುವ ಜನ ರಿಗೆ ಶೇ೩೨ರಷ್ಟು ಮೀಸಲಾತಿ ನೀಡಲಾಗಿದೆ. ಶೇ೩ ರಷ್ಟಿರುವ ಜನರಿಗೆ ಶೇ೧೦ ರಷ್ಟು ಮೀಸ ಲಾತಿ ನೀಡಲಾಗಿದೆ. ಈ ತಾರತಮ್ಯವನ್ನು ಹೋಗಲಾಡಿಸಬೇಕೆಂಬ ಹೋರಾಟಕ್ಕೆ ಆಳುವ ಸರಕಾರಗಳಿಂದ ಬೆಲೆ ಸಿಗದ ಪರಿಣಾಮ ಕಾ ನೂನು ಹೋರಾಟ ಆರಂಭವಾಗಿದೆ. ಮೊದಲು ಅರ್ಥಿಕ, ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಬಹಿರಂಗ ಪಡಿಸಬೇಕು, ಇಲ್ಲದಿದ್ದರೆ ಮತ್ತೆ ನಾವು ಜಾತುವರ್ಣ ವ್ಯವಸ್ಥೆ ಮರಳು ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಇದೊಂದು ಐತಿಹಾಸಿನ ದಿನ.೨೦೦೬ರ ಆಗಸ್ಟ್ ೨೧ರಂದು ತುಮಕೂರಿನ ಸರಕಾರಿ ಜೂನಿ ಯರ್ ಕಾಲೇಜು ಮೈದಾನದಲ್ಲಿ ಬೃಹತ್ ಅಹಿಂದ ಸಮಾವೇಶ ನಡೆದು,ಒಂದು ಸರಕಾರವೇ ಅಸ್ಥಿತ್ವಕ್ಕೆ ಬಂದಿತ್ತು.ಸAಘಟನೆಯ ಮೂಲಕ ಮತ್ತೊಮ್ಮೆ ಅಂತಹದ್ದ ಸಮಾವೇಶವನ್ನು ಡಾ.ಜಿ.ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸಿ ನಡೆಸಲಾಗುವುದು ಎಂದರು.
ವೇದಿಕೆಯಲ್ಲಿ ಹಿಂದುಳಿದ ವರ್ಗದ ಮುಖಂಡರಾದ ವೇಣುಗೋಪಾಲ್,ವಿಧಾನಪರಿಷತ್ ಸದಸ್ಯ ಪಿ.ಆರ್.ರಮೇಶ್, ವಿಧಾನಪರಿಷತ್ ಮಾಜಿ ಸದಸ್ಯ ವಿ.ಆರ್.ಸುದರ್ಶನ್,ಮಾಜಿ ಡಿವೈಎಸ್ಪಿ ಸುಬ್ಬಣ್ಣ, ಹೆಚ್.ಸಿ.ರುದ್ರಪ್ಪ, ಎಸ್.ನಾಗಣ್ಣ, ತುಮ ಕೂರು ಜಿಲ್ಲಾ ಹಿಂದುಳಿದ ಸಮುದಾಯಗಳ ಒಕ್ಕೂಟ ಚಂದ್ರಶೇಖರಗೌಡ ದನಿಯಕುಮಾರ್, ಸುರೇಶ್, ಪ್ರೆಸ್ ರಾಜಣ್ಣ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.